ತಿರುವನಂತಪುರಂ ಸಿಪಿಐಎಂ ಕಛೇರಿ ಮೇಲೆ ಕಲ್ಲುತೂರಾಟ: ಆರೆಸ್ಸೆಸ್‌ ಕೈವಾಡ ಎಂದ ಪಕ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೇರಳದ ತಿರುವನಂತಪುರಂನಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಕಚೇರಿಯ ಮೇಲೆ ಶನಿವಾರ ನಸುಕಿನಲ್ಲಿ ಕಲ್ಲು ತೂರಾಟ ನಡೆದಿದೆ ಎಂದು ಮೂಲಗಳು ವರದಿ ಮಾಡಿವೆ.

ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅಪರಿಚಿತರು ದಾಳಿ ನಡೆಸಿದ್ದಾರೆ. ಪಕ್ಷದ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿದ ಆರು ಮಂದಿ ಬೈಕ್‌ಗಳಲ್ಲಿ ಇದ್ದರು ಎನ್ನಲಾಗಿದೆ.

ಇಲ್ಲಿಯವರೆಗೆ ಯಾರೊಬ್ಬರು ಗಾಯಗೊಂಡಿರುವ ಕುರಿತು ವರದಿಯಾಗಿಲ್ಲ.

ದಾಳಿಯ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಸಿಪಿಐ (ಎಂ) ಆರೋಪಿಸಿದೆ. ಪಕ್ಷದ ನಾಯಕ ಅನವೂರ್ ನಾಗಪ್ಪನ್ ಕೂಡ ದಾಳಿಯ ಹಿಂದೆ ಬಿಜೆಪಿ ಪಾತ್ರವನ್ನು ಆರೋಪಿಸಿದ್ದಾರೆ.

ಆದರೆ ಬಿಜೆಪಿ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!