Sunday, October 2, 2022

Latest Posts

ಮೊಸಳೆಗಳೇ ತುಂಬಿದ್ದ ನದಿಯಲ್ಲಿ ಬಿದ್ದ ಬಾಲಕ: ಮುಂದೇನಾಯ್ತು? ಈ ವಿಡಿಯೋ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೊಸಳೆಗಳಿಂದ ತುಂಬಿರುವ ಚಂಬಲ್ ನದಿಯಲ್ಲಿ ಆಕಸ್ಮಿಕವಾಗಿ ಬಾಲಕನೊಬ್ಬ ಬಿದ್ದಿದ್ದು, ಸಹಾಯಕ್ಕಾಗಿ ಕಿರುಚಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.  ಈ ವಿಡಿಯೋವನ್ನು ಐಆರ್‌ಎಸ್ ಅಧಿಕಾರಿ ಭಾಗೀರಥ್ ಚೌಧರಿ ಹಂಚಿಕೊಂಡಿದ್ದಾರೆ. ಚಂಬಲ್ ನದಿಯಲ್ಲಿ ಮೊಸಳೆಗಳ ನಡುವೆ ಬಾಲಕನೊಬ್ಬ ಸಿಕ್ಕಿಬಿದ್ದಿದ್ದಾನೆ. ಬಾಲಕನ ಸುತ್ತಲೂ ಮೊಸಳೆಗಳು ಓಡಾಡುತ್ತಿವೆ. ಜೀವ ಭಯದಿಂದ ಸಹಾಯಕ್ಕಾಗಿ ಕಿರುಚಾಡಿದ್ದಾನೆ. ನದಿಯಲ್ಲಿದ್ದ ದೋಣಿಯೊಂದು ಬಾಲಕನ ಧ್ವನಿ ಕೇಳಿಸಿಕೊಂಡು ತಕ್ಷಣ ಹುಡುಗನಿದ್ದಲ್ಲಿಗೆ ತಲುಪಿ ರಕ್ಷಣೆ ಮಾಡಿದ್ದಾರೆ.

ಸಮಯಕ್ಕೆ ಸರಿಯಾಗಿ ದೋಣಿ ಬಾರದೆ ಇದ್ದಿದ್ದರೆ ಮತ್ತು ಸಕಾಲದಲ್ಲಿ ರಕ್ಷಣೆ ಮಾಡದೇ ಇದ್ದಿದ್ದರೆ ಬಾಲಕ ಮೊಸಳೆಗಳ ಬಾಯಿಗೆ ಬಲಿಯಾಗುತ್ತಿದ್ದ. ಕ್ಷಣಾರ್ಧದಲ್ಲಿ ಸ್ಪಂದಿಸಿ ಬಾಲಕನನ್ನು ರಕ್ಷಿಸಿದ ತಂಡವನ್ನು ಭಗೀರಥನ ಜೊತೆಗೆ ನೆಟ್ಟಿಗರು ಕೊಂಡಾಡುತ್ತಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!