ಕಾಶ್ಮೀರದಲ್ಲಿ ಚಿತ್ರೀಕರಣದ ವೇಳೆ ನಟ ಇಮ್ರಾನ್ ಹಶ್ಮಿ ಮೇಲೆ ಕಲ್ಲು ತೂರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ʼಗ್ರೌಂಡ್ ಜೀರೋʼ ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಬಾಲಿವುಡ್‌ ನಟ ಇಮ್ರಾನ್ ಹಶ್ಮಿ ಅವರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ನಟ ದಿನದ ಚಿತ್ರೀಕರಣವನ್ನು ಮುಗಿಸಿ ಸಂಜೆಯ ಸಮಯದಲ್ಲಿ ಮಾರುಕಟ್ಟೆ ಪ್ರದೇಶದತ್ತ ಸುತ್ತಾಡಲು ತೆರಳಿದ್ದಾಗ ಈ ಘಟನೆ ಸಂಭವಿಸಿದೆ.
ಕಲ್ಲು ತೂರಾಟ ನಡೆಸಿದ ಓರ್ವ ದುಷ್ಕರ್ಮಿಯನ್ನು ಗುರುತಿಸಿ ಬಂಧಿಸಲಾಗಿದೆ ಎಂದು ಅನಂತ್‌ನಾಗ್ ಪೊಲೀಸರು ತಿಳಿಸಿದ್ದಾರೆ.
ದಿ ಫ್ರೀ ಪ್ರೆಸ್ ಜರ್ನಲ್ ಪ್ರಕಾರ, ಸೆಕ್ಷನ್ 77/22 U/S 147, 148, 370, 336, 323 ಅಡಿಯಲ್ಲಿ ಆರೋಪಿಯ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಇಮ್ರಾನ್ ಹಶ್ಮಿ ಅವರು ಪ್ರಸ್ತುತ ತೇಜಸ್ ದೇವುಸ್ಕರ್ ನಿರ್ದೇಶನದ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರದಲ್ಲಿ ಹಶ್ಮಿ ಸೇನಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ಸಾಯಿ ತಮ್ಹಂಕರ್ ಹಶ್ಮ ಇಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಾಯಿ ಇಮ್ರಾನ್ ಪತ್ನಿಯಾಗಿ ನಟಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!