ಮೇಷ
ವಿರಾಮ ಬಯಸಿದರೂ ಕೆಲಸದ ಒತ್ತಡ ಬಾಧಿಸುವುದು. ಆಪ್ತರ ಸಂಗಡ ವಾಗ್ವಾದಕ್ಕೆ ಇಳಿಯಬೇಡಿ. ನೀವು ಮೌನವಾಗಿ ಉಳಿಯಿರಿ.
ವೃಷಭ
ಗತದಿನಗಳ ಬಗ್ಗೆ ಅತಿಯಾಗಿ ಚಿಂತಿಸದಿರಿ. ಈಗ ಮಾಡಬೇಕಾದ ಕೆಲಸಕ್ಕೆ ಆದ್ಯತೆ ಕೊಡಿ. ಕೆಲ ವಿಷಯಗಳಿಗೆ ಅತಿರೇಕದ ಪ್ರತಿಕ್ರಿಯೆ ತೋರುತ್ತೀರಿ.
ಮಿಥುನ
ಗುಣಾತ್ಮಕ ಸಂಕೇತ ಗಳಿಂದಲೇ ಇಂದಿನ ದಿನ ಆರಂಭ. ನಿಮಗೆ ಪೂರಕ ಪರಿಸ್ಥಿತಿ. ಆರ್ಥಿಕ ಚಿಂತೆ ನಿವಾರಣೆ. ಆತ್ಮೀಯರ ಸಂಗಡ ಖುಷಿ ಪಡುವಿರಿ.
ಕಟಕ
ನಿಮ್ಮ ಜತೆಗೆ ಅತಿಯಾದ ಸಲುಗೆ ಸಾಽಸುವವರ ಕುರಿತು ಎಚ್ಚರವಿರಲಿ. ಮನೆಯಲ್ಲಿ ಸೌಹಾರ್ದ ವಾತಾವರಣ, ನೆಮ್ಮದಿ.
ಸಿಂಹ
ಕೆಲವರನ್ನು ಕುರುಡಾಗಿ ನಂಬದಿರಿ. ಅವರಿಂದಲೇ ಮೋಸ ಹೋಗುವಿರಿ. ಕೆಲಸದ ಒತ್ತಡದಿಂದಾಗಿ ವಿಶ್ರಾಂತಿಗೆ ಆಸ್ಪದ ಸಿಗಲಾರದು.
ಕನ್ಯಾ
ಯೋಜನೆ ಹಾಕಿ ಕೆಲಸ ನಿರ್ವಹಿಸಿ. ಇಲ್ಲವಾದರೆ ಗೊಂದಲ ಎದುರಿಸುವಿರಿ. ಆರೋಗ್ಯ ಸ್ಥಿರ. ಹಣದ ಚಿಂತೆಯೊಂದು ಪರಿಹಾರ.
ತುಲಾ
ಜಡತ್ವ ಬಿಟ್ಟು ಕ್ರಿಯಾಶೀಲರಾಗಿ. ನಿಮ್ಮ ಹವ್ಯಾಸ ಬಿಡಬೇಡಿ. ದೈಹಿಕ ಶ್ರಮದಿಂದ ಬಳಲುವಿರಿ. ಆಪ್ತರ ಜತೆ ಮಾತಿನ ಚಕಮಕಿ
ವೃಶ್ಚಿಕ
ಎಲ್ಲರೂ ನಿಮ್ಮಂತೆ ಯೋಚಿಸಬೇಕು ಎಂದು ಬಯಸುವುದು ತಪ್ಪು. ಇತರರ ಭಾವನೆ ಗೌರವಿಸಿ. ಮನೆಯಲ್ಲಿ ಹಿರಿಯರಿಗೆ ಅನಾರೋಗ್ಯ ಸಂಭವ.
ಧನು
ಕೌಟುಂಬಿಕ ವಿಷಯ ಮುಖ್ಯವಾಗುತ್ತದೆ. ಕಳೆದು ಹೋದುದಕ್ಕೆ ಕೊರಗುತ್ತಾ ಕೂರದಿರಿ. ನಗುನಗುತ್ತಾ ನಿಮ್ಮ ಹೊಣೆ ನಿಭಾಯಿಸಿ. ಆರೋಗ್ಯ ಕಾಯ್ದುಕೊಳ್ಳಿ.
ಮಕರ
ಕೌಟುಂಬಿಕ ಪರಿಸ್ಥಿತಿ ನೆಮ್ಮದಿ ತರಲಿದೆ. ಆತ್ಮೀಯರ ಒಡನಾಟದಲ್ಲಿ ಸಂತೋಷ ಕಾಣುವಿರಿ. ಹಣ ಗಳಿಕೆಗೆ ಮೊಟಕು ದಾರಿ ಹಿಡಿಯದಿರಿ.
ಕುಂಭ
ವ್ಯವಹಾರದ ಬಗ್ಗೆ ಹೆಚ್ಚು ಗಮನ ಕೊಡಿ. ನಿರ್ಲಕ್ಷ್ಯ ತೋರಿದರೆ ನಷ್ಟ ಉಂಟಾದೀತು. ಹೆತ್ತವರು ಮಕ್ಕಳ ಜತೆ ಮೆದುವಾಗಿ ವರ್ತಿಸಬೇಕು.
ಮೀನ
ವ್ಯವಹಾರದಲ್ಲಿ ಮಹತ್ವದ ಬದಲಾವಣೆ ತೋರುವ ಸಾಧ್ಯತೆಯಿದೆ. ಮಾನಸಿಕ ಒತ್ತಡ ನಿವಾರಣೆಗೆ ಧ್ಯಾನ ಸಹಕಾರಿಯಾದೀತು.



