August 12, 2026
Wednesday, August 12, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 19 | ಬ್ರೇಕ್‌ ಫಾಸ್ಟ್‌ಗೆ ಒಂದೇ ತರಹದ ಇಡ್ಲಿ ತಿಂದು ಬೇಜಾರಾಗಿದ್ದರೆ, ಇಂದೇ ಟ್ರೈ ಮಾಡಿ ಈ ಮ್ಯಾಜಿಕ್ ಇಡ್ಲಿ!

ಸಾಮಾನ್ಯವಾಗಿ ಮಕ್ಕಳಿಗೆ ಸೊಪ್ಪು ತಿನ್ನಿಸುವುದು ಕಷ್ಟದ ಕೆಲಸ. ಆದರೆ ಇಡ್ಲಿಗೆ ಪಾಲಕ್ ಸೊಪ್ಪಿನ ಬಣ್ಣ ಮತ್ತು ಆಲೂಗಡ್ಡೆ ಅಥವಾ ಪನೀರ್ ಮಸಾಲೆಯ ಸ್ಟಫಿಂಗ್ ನೀಡುವ ಮೂಲಕ ಇದನ್ನು ಸುಲಭವಾಗಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಇಡ್ಲಿ ಹಿಟ್ಟು

ಪಾಲಕ್ ಸೊಪ್ಪು

ಆಲೂಗಡ್ಡೆ ಅಥವಾ ಪನೀರ್

ಈರುಳ್ಳಿ

ಹಸಿ ಮೆಣಸಿನಕಾಯಿ

ಶುಂಠಿ ಪೇಸ್ಟ್

ಉಪ್ಪು ಮತ್ತು ಎಣ್ಣೆ

ಜೀರಿಗೆ ಮತ್ತು ಸಾಸಿವೆ

ಮಾಡುವ ವಿಧಾನ

ಮೊದಲೇ ಸಿದ್ಧವಿರುವ ಇಡ್ಲಿ ಹಿಟ್ಟಿಗೆ ರುಬ್ಬಿದ ಪಾಲಕ್ ಪೇಸ್ಟ್ ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಹಿಟ್ಟು ಹಸಿರು ಬಣ್ಣಕ್ಕೆ ತಿರುಗುತ್ತದೆ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ ಒಗ್ಗರಣೆ ಕೊಟ್ಟು, ಈರುಳ್ಳಿ, ಶುಂಠಿ-ಮೆಣಸಿನಕಾಯಿ ಪೇಸ್ಟ್ ಹಾಕಿ ಹುರಿಯಬೇಕು. ಇದಕ್ಕೆ ಬೇಯಿಸಿದ ಆಲೂಗಡ್ಡೆ ಅಥವಾ ಪನೀರ್, ಉಪ್ಪು ಸೇರಿಸಿ ಚೆನ್ನಾಗಿ ಕೈಡಿಸಿ ಒಲೆಯಿಂದ ಇಳಿಸಿ. ಈ ಮಿಶ್ರಣ ತಣ್ಣಗಾದ ಮೇಲೆ ಸಣ್ಣ ಸಣ್ಣ ತಟ್ಟೆಯ ಆಕಾರದ ಉಂಡೆಗಳನ್ನುಮಾಡಿಟ್ಟುಕೊಳ್ಳಬೇಕು.

ನಂತರ ಇಡ್ಲಿ ಪಾತ್ರೆಗೆ ಎಣ್ಣೆ ಸವರಿ, ಮೊದಲು ಅರ್ಧ ಚಮಚ ಪಾಲಕ್ ಇಡ್ಲಿ ಹಿಟ್ಟು ಹಾಕಿ. ಅದರ ಮಧ್ಯದಲ್ಲಿ ಸಿದ್ಧಪಡಿಸಿದ ಆಲೂಗಡ್ಡೆ/ಪನೀರ್ ಮಸಾಲೆ ಉಂಡೆಯನ್ನು ಇಟ್ಟು ಅದರ ಮೇಲೆ ಮತ್ತೆ ಸ್ವಲ್ಪ ಇಡ್ಲಿ ಹಿಟ್ಟು ಹಾಕಿ ಮಸಾಲೆಯನ್ನು ಸಂಪೂರ್ಣವಾಗಿ ಮುಚ್ಚಿ ಇಡ್ಲಿ ಕುಕ್ಕರ್‌ನಲ್ಲಿ 10 ರಿಂದ 12 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿದರೆ ಬಿಸಿಬಿಸಿಯಾದ ಮತ್ತು ಮೃದುವಾದ ಸ್ಟಫ್ಡ್ ಪಾಲಕ್ ಇಡ್ಲಿ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !