ಬೆಳಗ್ಗೆ ತಿಂಡಿಗೆ ಏನು ಮಾಡೋದಪ್ಪಾ? ಅಂತ ತಲೆ ಕೆಡಿಸಿಕೊಳ್ಳೋರಿಗೆ ಈ ಹೆಲ್ದಿ & ಟೇಸ್ಟಿ ಮೂಂಗ್ ದಾಲ್ ದೋಸೆ ಬೆಸ್ಟ್ ಆಪ್ಷನ್. ನೆನೆಸೋದು ಒಂದೇ ಕೆಲಸ, ಹಿಟ್ಟು ಹುಳಿ ಬರೋವರೆಗೂ ಕಾಯೋ ಕೆಲಸವೇ ಇಲ್ಲ. ಪಟ್‌ಪಟ್ ಅಂತ 10 ನಿಮಿಷದಲ್ಲಿ ಸೂಪರ್ ದೋಸೆ ರೆಡಿಯಾಗಿರುತ್ತೆ.
ಹೆಸರು ಬೇಳೆ: 1 ಕಪ್ (3-4 ಗಂಟೆ ನೆನೆಸಿಟ್ಟಿದ್ದು)
ಹಸಿಮೆಣಸಿನಕಾಯಿ
ಶುಂಠಿ
ಜೀರಿಗೆ
ಕೊತ್ತಂಬರಿ ಸೊಪ್ಪು
ಈರುಳ್ಳಿ
ಉಪ್ಪು
ಅಡುಗೆ ಎಣ್ಣೆ
ಮೊದಲು ನೆನೆಸಿದ ಹೆಸರು ಬೇಳೆಯ ನೀರೆಲ್ಲಾ ಬಸಿದು, ನಂತರ ಮಿಕ್ಸಿ ಜಾರ್‌ಗೆ ಬೇಳೆ, ಹಸಿಮೆಣಸಿನಕಾಯಿ, ಶುಂಠಿ ಮತ್ತು ಜೀರಿಗೆ ಹಾಕಿ, ಸ್ವಲ್ಪವೇ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟನ್ನು ಒಂದು ಬೌಲ್‌ಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
ಹಂಚನ್ನ ಗ್ಯಾಸ್ ಸ್ಟವ್ ಮೇಲಿಟ್ಟು ಬಿಸಿ ಮಾಡಿ. ಕಾಯ್ದ ಹಂಚಿನ ಮೇಲೆ ಒಂದು ಸೌಟು ಹಿಟ್ಟು ಹಾಕಿ, ನಿಧಾನಕ್ಕೆ ತೆಳ್ಳಗೆ ಹರಡಿ. ಸುತ್ತಲೂ ಸ್ವಲ್ಪ ಎಣ್ಣೆ ಹಾಕಿ. ದೋಸೆ ಗರಿಗರಿಯಾಗುವವರೆಗೆ ಬೇಯಿಸಿ. ಒಂದು ಸೈಡ್ ಬೆಂದ್ಮೇಲೆ ಮಡಚಿ ಪ್ಲೇಟ್‌ಗೆ ಹಾಕಿ.
ಈಗ ಬಿಸಿ ಬಿಸಿ ಮೂಂಗ್ ದಾಲ್ ದೋಸೆ ಟೇಸ್ಟ್ ಮಾಡೋಕೆ ರೆಡಿ. ಇದರ ಜೊತೆ ಕಾಯಿ ಚಟ್ನಿ ಇಲ್ಲ ಖಾರ ಚಟ್ನಿ ಜೊತೆ ತಿಂದರೆ ಆಹಾ… ತಿಂತಾನೇ ಇರಬೇಕು ಅನಿಸುತ್ತೆ!



