September 15, 2026
Tuesday, September 15, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 89 | ಹಸಿರು ನೀರ್ ದೋಸೆ: ಪಾಲಕ್ ಸೊಪ್ಪು ತಿನ್ನಿಸೋಕೆ ಬೆಸ್ಟ್‌ ವೇ ಇದೇ ನೋಡಿ

ಬೆಳ್ಳಗಿರೋ ನೀರ್ ದೋಸೆ ಎಲ್ಲರ ಮನೆಯಲ್ಲೂ ಸಾಮಾನ್ಯ. ಆದ್ರೆ ಇವತ್ತು ಈ ಬಿಳಿ ದೋಸೆಗೆ ಸ್ವಲ್ಪ ಕಲರ್ ಕೊಟ್ರೆ ಹೇಗಿರುತ್ತೆ? ಮಕ್ಕಳು ಆಡೋ ಕಲರ್ ಅಲ್ಲ. ಇದು ಹೆಲ್ದಿ ಕಲರ್. ಪಾಲಕ್ ಸೊಪ್ಪಿನ ಹಸಿರು ಕಲರ್. ಜತೆಗೆ ಪಾಲಕ್ ಸೊಪ್ಪಿನ ಹೆಲ್ತ್ ಬೆನಿಫಿಟ್ಸ್ ಕೂಡ ಈ ಸಾದಾ ನೀರ್ ದೋಸೆಯನ್ನು ಸ್ಪೆಷಲ್ ಆಗಿಸುತ್ತೆ.

ಏನೆಲ್ಲಾ ಬೇಕು?

ಅಕ್ಕಿ ಹಿಟ್ಟು – 1 ಕಪ್
ಪಾಲಕ್ ಸೊಪ್ಪಿನ ಪ್ಯೂರಿ – ½ ಕಪ್
ರವೆ ಅಥವಾ ಸಜಿ – 2 ಚಮಚ
ಹಸಿಮೆಣಸು ಪೇಸ್ಟ್ – 1 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯವಿರುವಷ್ಟು
ನೀರು – ಅಗತ್ಯವಿರುವಷ್ಟು

ಮಾಡೋದು ಹೇಗೆ?

ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ರವೆ, ಪಾಲಕ್ ಪ್ಯೂರಿ, ಹಸಿಮೆಣಸು ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಸೇರಿಸಿ, ನೀರು ಹಾಕಿ ತೆಳುವಾದ ಹಿಟ್ಟು ರೆಡಿ ಮಾಡ್ಕೊಳ್ಳಿ. ಬಿಸಿ ದೋಸೆ ಹಂಚಿಗೆ ಸ್ವಲ್ಪ ಎಣ್ಣೆ ಸವರಿ, ನೀರು ದೋಸೆಯಂತೆ ಹಿಟ್ಟನ್ನು ಸುರಿದು ಮುಚ್ಚಿ 2–3 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ದೋಸೆ ಬೆಂದ ಬಳಿಕ ತೆಗೆದು ಬಿಸಿ ಬಿಸಿಯಾಗಿ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !