October 16, 2026
Friday, October 16, 2026
spot_img

ವಿಶ್ವ ರಾಜಕಾರಣದಲ್ಲಿ ಬಿರುಗಾಳಿ: ಇರಾನ್ ಜೊತೆ ಟ್ರಂಪ್ ದೋಸ್ತಿ, ಅಮೆರಿಕ-ಇಸ್ರೇಲ್ ಬಾಂಧವ್ಯಕ್ಕೆ ಬಿರುಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ದಶಕಗಳಿಂದ ಧಗಧಗಿಸುತ್ತಿದ್ದ ಸಂಘರ್ಷಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮಹತ್ವದ ಶಾಂತಿ ಒಪ್ಪಂದಕ್ಕೆ ಔಪಚಾರಿಕವಾಗಿ ಸಹಿ ಹಾಕುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ನೆತನ್ಯಾಹು ಅಸಮಾಧಾನ, ಇಸ್ರೇಲ್ ಭಿನ್ನಮತ

ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸುತ್ತಿರುವುದು ಜಾಗತಿಕವಾಗಿ ನಿರಾಳತೆ ತಂದಿದ್ದರೂ, ಅಮೆರಿಕದ ಪರಮ ಮಿತ್ರ ಇಸ್ರೇಲ್‌ಗೆ ತೀವ್ರ ಆಘಾತ ನೀಡಿದೆ. ಟ್ರಂಪ್ ಅವರ ಈ ನಡೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕೆಂಗಣ್ಣಿಗೆ ಕಾರಣವಾಗಿದ್ದು, ಅಮೆರಿಕ-ಇಸ್ರೇಲ್ ನಡುವಿನ ಸ್ನೇಹದಲ್ಲಿ ಬಿರುಕು ಮೂಡಿಸಿದೆ ಎಂದು ಆಂತರಿಕ ಮೂಲಗಳು ತಿಳಿಸಿವೆ.

60 ದಿನಗಳ ಕಾಲಮಿತಿ: ಹಳಿ ತಪ್ಪಿಸಲು ತಂತ್ರ?

ಪ್ರಸ್ತುತ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಇದರ ಅಂತಿಮ ಅನುಷ್ಠಾನಕ್ಕೆ 60 ದಿನಗಳ ಗಡುವು ವಿಧಿಸಲಾಗಿದೆ. ಈ ನಿರ್ಣಾಯಕ ಅವಧಿಯಲ್ಲಿ ಒಪ್ಪಂದವನ್ನು ಹಳಿ ತಪ್ಪಿಸಲು ಹಾಗೂ ಅಂತಿಮ ಫಲಿತಾಂಶದ ಮೇಲೆ ಪ್ರಭಾವ ಬೀರಲು ಇಸ್ರೇಲ್ ತೆರೆಮರೆಯ ಪ್ರಯತ್ನಗಳನ್ನು ಆರಂಭಿಸಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ಜಾಗತಿಕ ಯುದ್ಧಕ್ಕೆ ಮುಕ್ತಿ ಹಾಡಿದ ಈ ಒಪ್ಪಂದ, ಮಿತ್ರರಾಷ್ಟ್ರಗಳ ನಡುವೆ ಹೊಸ ಆಂತರಿಕ ಸಂಘರ್ಷಕ್ಕೆ ನಾಂದಿ ಹಾಡಿದೆ.

Must Read