Thursday, March 23, 2023

Latest Posts

SHOCKING| ತಾಯಿ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಕಚ್ಚಿ ಕೊಂದು ಹಾಕಿದ ಬೀದಿ ನಾಯಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರತಿದಿನ ಯಾವುದಾದರೊಂದು ಪ್ರದೇಶದಲ್ಲಿ ಬೀದಿ ನಾಯಿಗಳ ದಾಳಿಗೆ ಪುಟ್ಟ ಮಕ್ಕಳು ಬಲಿಯಾಗುತ್ತಲೇ ಇರುತ್ತಾರೆ. ಇಂತಹದೊಂದು ವಿದ್ರಾವಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಬೀದಿ ನಾಯಿಗಳು ಕೊಂದು ಹಾಕಿವೆ.

ಒಂದು ತಿಂಗಳ ಮಗುವನ್ನು ಬೀದಿ ನಾಯಿಗಳು ಬರ್ಬರವಾಗಿ ಕಚ್ಚಿ ಕೊಂದು ಹಾಕಿವೆ. ಸಿರೋಹಿ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲದ ವೇಳೆ ತಾಯಿ ಪಕ್ಕ ಮಲಗಿದ್ದ ಹೆಣ್ಣು ಮಗುವನ್ನು ಎರಡು ನಾಯಿಗಳು ಎತ್ತಿಕೊಂಡು ಹೋಗಿವೆ. ಮಧ್ಯರಾತ್ರಿ 2 ಗಂಟೆಗೆ ತಾಯಿ ಎದ್ದು ನೋಡಿದಾಗ ತನ್ನ ಕೂಸು ಕಾಣಲಿಲ್ಲ. ಆತಂಕಗೊಂಡ ತಾಯಿ ಹೊರಬಂದು ನಾಯಿಗಳು ಬೊಗಳುವುದನ್ನು ನೋಡಿ ಗಾಬರಿಗೊಂಡು ನಾಯಿಗಳನ್ನು ಓಡಿಸಿದ್ದಾರೆ. ಆದರೂ ಮಗು ಮಾತ್ರ ಬದುಕುಳಿಯಲಿಲ್ಲ.

ಎರಡು ನಾಯಿಗಳು ಆಸ್ಪತ್ರೆಯ ಟಿಬಿ ವಾರ್ಡ್‌ಗೆ ಹೋಗುತ್ತಿದ್ದು, ಒಂದು ನಾಯಿ ಮಗುವನ್ನು ಹೊರಗೆ ಎಳೆತರುತ್ತಿರುವುದು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಮಗುವಿನ ತಂದೆ ಟಿಬಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪತ್ನಿ ತನ್ನ ಮಗುವಿನೊಂದಿಗೆ ಪತಿಯನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಬಂದ ವೇಳೆ ಈ ದುರಂತ ನಡೆದಿದೆ.

ಈ ಘಟನೆಯು ಸ್ಥಳದಲ್ಲಿ ಕೋಲಾಹಲ ಸೃಷ್ಟಿಸಿದೆ. ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿರುವುದಾಗಿ ಸಿರೋಹಿ ಜಿಲ್ಲಾ ಆಸ್ಪತ್ರೆಯ ಪ್ರಧಾನ ವೈದ್ಯಾಧಿಕಾರಿ ವೀರೇಂದ್ರ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!