ಹಸಿರಾಗಿ ತೆರೆದ ಷೇರುಪೇಟೆ: 300 ಅಂಕ ಏರಿದ ಸೆನ್ಸೆಕ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ಮಾರುಕಟ್ಟೆಗಳಲ್ಲಿ ನಕಾರಾತ್ಮಕ ಭಾವನೆಯ ಹೊರತಾಗಿಯೂ ದೇಶೀಯ ಈಕ್ವಿಟಿ ಮಾರುಕಟ್ಟೆಗಳು ಹಸಿರು ಬಣ್ಣದಲ್ಲಿ ತೆರೆದಿವೆ. ಎನ್‌ಎಸ್‌ಇ ನಿಫ್ಟಿ 50ಯು 79.70 ಪಾಯಿಂಟ್‌ಗಳು ಅಥವಾ 0.46 ಶೇಕಡಾ ಏರಿಕೆಯಾಗಿ 17,383.65 ಅಂಕಗಳಿಗೆ ತಲುಪಿದೆ. ಬಿಎಸ್‌ಇ ಸೆನ್ಸೆಕ್ಸ್ 301.27 ಪಾಯಿಂಟ್‌ಗಳು ಅಥವಾ 0.51 ಶೇಕಡಾ ಏರಿ 59,263.39 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ನಿಫ್ಟಿ 50 ಯಲ್ಲಿ ಅದಾನಿ ಎಂಟರ್‌ಪ್ರೈಸಸ್, ಹಿಂಡಾಲ್ಕೊ, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್ ಮತ್ತು ಮಹೀಂದ್ರಾ ಮತ್ತು ಮಹೀಂದ್ರಾ ಟಾಪ್ ಗೇನರ್ ಆಗಿದ್ದರೆ, ಅಪೊಲೊ ಹಾಸ್ಪಿಟಲ್, ಬ್ರಿಟಾನಿಯಾ, ಎಚ್‌ಡಿಎಫ್‌ಸಿ ಲೈಫ್, ಎಸ್‌ಬಿಐ ಲೈಫ್ ಮತ್ತು ಟಾಟಾ ಕನ್ಸ್ಯೂಮರ್ ಟಾಪ್ ಲೂಸರ್‌ಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!