ಕಡತಗಳ ವಿಲೇವಾರಿಯಲ್ಲಿ ನಿರ್ಲಕ್ಶ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಸಚಿವ ಆರ್. ಅಶೋಕ್

ಹೊಸದಿಗಂತ ವರದಿ, ಮೈಸೂರು:

ರಾಜ್ಯದ ಕಂದಾಯ ಇಲಾಖೆಯಲ್ಲಿ ಕಳೆದ 15-20 ವರ್ಷಗಳಿಂದ ಬಾಕಿ ಉಳಿದಿರುವ ಕಡತಗಳು, ಅರ್ಜಿಗಳ ವಿಲೇವಾರಿಗಾಗಿ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಸ್ಪಂದನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಕಡತಗಳ ವಿಲೇವಾರಿ ಮಾಡಲು ನಿರ್ಲಕ್ಶ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದರು.
ಗುರುವಾರ ಮಧ್ಯಾಹ್ನ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡತ ವಿಲೇವಾರಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು, ಬಡವರು, ಎಸ್ಸಿ, ಎಸ್ಟಿ ವರ್ಗದವರು ನೀಡಿರುವ ಅರ್ಜಿಗಳು ಹಲವು ವರ್ಷಗಳಿಂದ ಸಂಬAಧಿದ ಕಚೇರಿಗಳಲ್ಲಿ ಕೊಳೆಯುತ್ತಾ ಬಿದ್ದಿವೆ. ಈ ಅರ್ಜಿಗಳ ವಿಲೇವಾರಿ ಆಗಬೇಕು, ಅರ್ಜಿ ಕೊಟ್ಟಿರುವವರಿಗೆ ಸೂಕ್ತ ಪರಿಹಾರ, ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಕಡತಗಳ ವಿಲೇವಾರಿ ಅಭಿಯಾನವನ್ನು ಎರಡು ವಾರಗಳ ಕಾಲ ನಡೆಸಲಾಗುತ್ತಿದೆ. ಗ್ರಾಮ ಸೇವಕನಿಂದ ಹಿಡಿದು ಜಿಲ್ಲಾಧಿಕಾರಿ ತನಕ ಎಲ್ಲರೂ ಬಾಕಿ ಇರುವ ಕಡತಗಳ ವಿಲೇವಾರಿ ಮಾಡಿ, ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಕಡತಗಳಿಗೆ ಮುಕ್ತಿ ಕೊಡಬೇಕು ಎಂದು ತಾಕೀತು ಮಾಡಿದರು.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಸುಮಾರು 30 ರಿಂದ 40 ಸಾವಿರ ತನಕ ಅರ್ಜಿಗಳು, ಕಡತಗಳು ಬಾಕಿ ಉಳಿದಿವೆ. ಅವುಗಳ ವಿಲೇವಾರಿ ಮಾಡುವುದಕ್ಕಾಗಿ ಕೆಲಸದ ವೇಳೆಯನ್ನು ಹೆಚ್ಚಿಸಲಾಗಿದೆ. ಬೆಳಗ್ಗೆ 10 ರಿಂದ ಸಂಜೆ 7ರ ತನಕ ಅಧಿಕಾರಿಗಳು, ಸಿಬ್ಬಂದಿಗಳು ಕಡತ ವಿಲೇವಾರಿಯನ್ನು ಕಡ್ಡಾಯವಾಗಿ ಮಾಡಲೇ ಬೇಕು. ಶನಿವಾರ ವರ‍್ಯಾಂತ ರಜೆ ಕೂಡ ಇರುವುದಿಲ್ಲ, ಭಾನುವಾರ ಕೂಡ ವಿರಾಮ ಇರುವುದಿಲ್ಲ. ಕಾಫಿ, ಟೀ, ತಿಂಡಿ, ಊಟದ ವೇಳೆ ಎಂದು ಕಾಲ ಕಳೆಯುವಂತಿಲ್ಲ, ಬಡವರು, ಎಸ್ಸಿ, ಎಸ್ಟಿ, ರೈತರ ಕಡತಗಳು ವಿಲೇವಾರಿ ಆಗುವ ತನಕ ಕೆಲಸ ಮಾಡಲೇ ಬೇಕು, ಯಾರೂ ಕೂಡ ನಿನಿರ್ಲಕ್ಶ್ಯ ತೋರುವಂತಿಲ್ಲ, ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೇಷ್ಟು ಕಡತಗಳಿತ್ತು, ಎಷ್ಟೇಷ್ಟು ವಿಲೇವಾರಿಯಾಗಿದೆ ಎಂಬುದರ ಸಂಪೂರ್ಣ ವರದಿಯನ್ನು ತರಿಸಿಕೊಂಡು, ಕೆಲಸದಲ್ಲಿ ನಿರ್ಲಕ್ಶ್ಯ ತೋರಿರುವುದು ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ರಾಜ್ಯದ 54 ಲಕ್ಷ ಮಂದಿ ರೈತರಿಗೆ ಅವರ ಮನೆಗೆ ದಾಖಲೆಗಳನ್ನು ತಲುಪಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಮಾ.12 ರಂದು ಚಿಕ್ಕಾಬಳ್ಳಾಪುರದಲ್ಲಿ ಮುಖ್ಯಮಂತ್ರಿಗಳೊAದಿಗೆ ರೈತರ ಮನೆಗಳಿಗೆ ದಾಖಲೆಗಳನ್ನು ತಲುಪಿಸುವ ಕೆಲಸಕ್ಕೆ ಚಾಲನೆ ನೀಡಲಾಗುವುದು. ಬಿಪಿಎಲ್ಕಾರ್ಡ್ ಆಧಾರ್ ಕಾರ್ಡ್ ಹೊಂದಿರುವ 60 ವರ್ಷ ಮೇಲ್ಪಟ್ಟವರಿಗೆ ಅವರ ಮನೆಗೆ ಬಾಗಲಿಗೆ ಪಿಂಚಣಿಯನ್ನು ತಲುಪಿಸುವುದಕ್ಕೆ ಚಾಲನೆ ನೀಡಲಾಗಿದೆ. ಕಳೆದ 6 ತಿಂಗಳಲ್ಲಿ 32 ಸಾವಿರ ಜನರಿಗೆ ಈ ಸೌಲಭ್ಯವನ್ನು ತಲುಪಿಸಲಾಗಿದೆ ಎಂದು ಹೇಳಿದರು.
ರೈತ ತನ್ನ ಜಮೀನಿನ ಸ್ಕೇಚ್‌ನನ್ನು ತಾನೇ ಮಾಡಿಕೊಂಡು ದಾಖಲೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಫ್ಟ್ವೇರ್‌ವೊಂದನ್ನು ತರಲಾಗುತ್ತಿದೆ. ಇದು ಕಾರ್ಯರೂಪಕ್ಕೆ ಬಂದ ನಂತರ ರೈತ ತನ್ನ ಜಮೀನಿನಲ್ಲಿಯೇ ನಿಂತು ತನ್ನಗೆ ಸೇರಿದ ಜಮೀನಿನನ್ನು ಸ್ಕೇಚ್ ಮಾಡಿ, ಅದನ್ನು ಸಾಫ್ಟ್ ವೇರ್‌ಗೆ ಅಪ್ ಲೋಡ್ ಮಾಡಿದರೆ ಸಾಕು, ನೋಂದಣಿ ಇಲಾಖೆಯಲ್ಲಿ ನೋಂದಣಿಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ಪ್ರಾದೇಶಿಕ ಆಯುಕ್ತ ಪ್ರಕಾಶ್, ಜಿಲ್ಲಾಧಿಕಾರಿ ಡಾ,ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!