ರಷ್ಯಾದ ವಿರುದ್ಧ ಕಠಿಣ ನಿರ್ಬಂಧ ಹೇರಿ: ವಿಶ್ವ ರಾಷ್ಟ್ರಗಳಿಗೆ ಉಕ್ರೇನ್​ ಅಧ್ಯಕ್ಷರ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಷ್ಯಾದ ವಿರುದ್ಧ ಎಲ್ಲ ರಾಷ್ಟ್ರಗಳು ಕಠಿಣ ನಿರ್ಬಂಧಗಳನ್ನು ಹೇರಬೇಕು ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ವಿಶ್ವ ರಾಷ್ಟ್ರಗಳನ್ನು ಕೋರಿದ್ದಾರೆ.
ರಷ್ಯಾದ ಎಲ್ಲ ಬ್ಯಾಂಕುಗಳ ಮೇಲೆ ನಿಷೇಧ, ತೈಲ ನಿರ್ಬಂಧ ಮತ್ತು ವ್ಯಾಪಾರ ನಿಲ್ಲಿಸುವುದು ಸೇರಿದಂತೆ ಗರಿಷ್ಠ ನಿಷೇಧಗಳನ್ನು ವಿಧಿಸಬೇಕು ಎಂದು ದಾವೋಸ್​ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ವಾರ್ಷಿಕ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ಕರೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಿದ ಉಕ್ರೇನ್​ ಅಧ್ಯಕ್ಷ, ಕ್ರೂರ ಗುಂಪೊಂದು ಜಗತ್ತನ್ನು ಆಳುತ್ತದೆಯೇ ಎಂದು ನಿರ್ಧರಿಸುವ ಕ್ಷಣ ಇದಾಗಿದೆ. ಅಂತಹ ದೇಶವಾದ ರಷ್ಯಾದ ಮೇಲೆ ಗರಿಷ್ಠ ನಿರ್ಬಂಧಗಳನ್ನು ಹೇರಬೇಕು. ಆ ದೇಶದೊಂದಿಗೆ ವ್ಯಾಪಾರವನ್ನು ಕಡಿದುಕೊಳ್ಳುವ ಮೂಲಕ ಬ್ಯಾಂಕ್​ ವ್ಯವಹಾರ, ತೈಲದ ಮೇಲೂ ನಿರ್ಬಂಧ ಹೇರಿ. ನಮಗೆ ಮೌಲ್ಯಗಳು ಮುಖ್ಯವಾಗಬೇಕು ಎಂದು ಹೇಳಿದ್ದಾರೆ.

ನಮ್ಮ ದೇಶದ ಯಾವುದೇ ಭೂಭಾಗದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತೇವೆ. ಈಗಾಗಲೇ ಡೆನ್ಮಾರ್ಕ್ ಮತ್ತು ಯುರೋಪಿಯನ್​ ಒಕ್ಕೂಟ ಕೆಲ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿವೆ. ಇತರ ರಾಷ್ಟ್ರಗಳು ಉಕ್ರೇನ್​ನಲ್ಲಿ ವ್ಯಾಪಾರ, ಹೂಡಿಕೆಗೆ ಮುಂದೆ ಬರಬೇಕು ಎಂದರು.

ರಷ್ಯಾದ ದಾಳಿ ಪ್ರಪಂಚದಾದ್ಯಂತ ಬಡತನ ಮತ್ತು ಹತಾಶೆ ಪ್ರಚೋದಿಸುವುದಾಗಿದೆ. ಮತ್ತೊಂದು ಯುದ್ಧದಿಂದ ವಿಶ್ವವನ್ನು ರಕ್ಷಿಸಲು ಪ್ರಪಂಚವು ನಿರ್ಬಂಧ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಗತ್ತು ಒಗ್ಗೂಡಬೇಕು. ಜಗತ್ತು ತನ್ನ ಏಕತೆ ಕಳೆದುಕೊಳ್ಳಬಾರದು. ನಾವು ಈ ಯುದ್ಧವನ್ನು ಗೆಲ್ಲಬೇಕಾಗಿದೆ. ಅದಕ್ಕೆ ನಮಗೆ ನಿಮ್ಮ ಬೆಂಬಲ ಬೇಕು ಎಂದು ಉಕ್ರೇನ್​ ಅಧ್ಯಕ್ಷ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!