ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಫಿಲಿಪೈನ್ಸ್‌ನಲ್ಲಿ (Southern Philippines) ಇಂದು (ನ.17) 7.2 ತೀವ್ರತೆಯ ಪ್ರಬಲ ಭೂಕಂಪ(Earthquake) ಸಂಭವಿಸಿದೆ.
ಫಿಲಿಪೈನ್ ಇನ್ಸ್ಟಿಟ್ಯೂಟ್ ಆಫ್ ಜ್ವಾಲಾಮುಖಿ ಮತ್ತು ಭೂಕಂಪನಶಾಸ್ತ್ರದ ಪ್ರಕಾರ, ಭೂಕಂಪವು 10 ಕಿಲೋಮೀಟರ್ (6 ಮೈಲುಗಳು) ದೂರದಲ್ಲಿ ಭೂಕಂಪ ಸಂಭವಿಸಿದೆ.
ಭೂಕಂಪವು 6.7 ತೀವ್ರತೆಯನ್ನು ಹೊಂದಿದ್ದು, ಫಿಲಿಪೈನ್ಸ್‌ನ ದಕ್ಷಿಣ ಬುರಿಯಾಸ್‌ನಿಂದ 26 ಕಿಲೋಮೀಟರ್ (16 ಮೈಲಿ) ದೂರದಲ್ಲಿದೆ ಈ ಭೂಕಂಪ ಸಂಭವಿಸಿದೆ ಎಂದು US ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ. ಈವರೆಗೆ ಯಾವುದೇ ಪ್ರಾಣಹಾನಿ ಮತ್ತು ಹಾನಿಯ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದೆ.