ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 50 ನೇ ಶತಕವನ್ನು ಗಳಿಸಿದ್ದಲ್ಲದೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.
ಅಂದಿನಿಂದ ಎಲ್ಲರೂ ವಿರಾಟ್ ಕೊಹ್ಲಿಯನ್ನು ಹೊಗಳುವುದರಲ್ಲಿ ನಿರತರಾಗಿದ್ದಾರೆ. ಇದೀಗ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ವಿರಾಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಕಂಗನಾ ರನೌತ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪಂದ್ಯದ ಸಮಯದ ವಿಡಿಯೋ ಹಂಚಿಕೊಂಡಿದ್ದಾರೆ, ಅಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ. ಈ ಸಂದರ್ಭವನ್ನು ಹೊಗಳಿದ ಕಂಗನಾ, ಸಾಮಾಜಿಕ ಮಾಧ್ಯಮದಲ್ಲಿ ಅವರಿಗಾಗಿ ಸುಂದರವಾದ ಶೀರ್ಷಿಕೆ ಸಹ ಬರೆದಿದ್ದಾರೆ.
‘ಎಷ್ಟು ಅದ್ಭುತ, ದಾಖಲೆ ಮುರಿದಾಗ ಹೇಗಿರಬೇಕು, ನಡೆದುಕೊಳ್ಳಬೇಕು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ. ಅವರು ನಡೆದಾಡುವ ಭೂಮಿಯನ್ನು ಪೂಜಿಸಬೇಕು. ಅದ್ಭುತ ಸ್ವಾಭಿಮಾನ ಮತ್ತು ಚಾರಿತ್ರ್ಯ ಹೊಂದಿರುವ ಶ್ರೇಷ್ಠ ವ್ಯಕ್ತಿ, ಅವರು ಅದಕ್ಕೆ ಅರ್ಹರು’ ಎಂದು ಕಂಗನಾ ಬರೆದಿದ್ದಾರೆ.