ಬೂದಿ ಮುಚ್ಚಿದ ಕೆಂಡದಂತಿರುವ ಹೈದರಾಬಾದ್‌ನ ಪಾತಬಸ್ತಿ: ಎಲ್ಲೆಡೆ ಬಿಗಿ ಪೊಲೀಸ್‌ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೈದರಾಬಾದ್ ಪಾತಬಸ್ತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವಾಗ? ಏನು ನಡೆಯುತ್ತದೆ ಎಂಬ ಆತಂಕದಲ್ಲಿ ಸ್ಥಳೀಯ ಜನ ಕಾಲ ಕಳೆಯುತ್ತಿದ್ದಾರೆ. ಬಿಜೆಪಿ ಶಾಸಕ ರಾಜಾಸಿಂಗ್ ನೀಡಿರುವ ಹೇಳಿಕೆ ಕೋಲಾಹಲ ಉಂಟುಮಾಡಿದೆ. ರಾಜಾಸಿಂಗ್ ಹೇಳಿಕೆ ವಿರೋಧಿಸಿ ಹಲವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಲಯ ಆದೇಶದ ಮೇರೆಗೆ ಜಾಮೀನು ನೀಡಿತ್ತು. ಗುರುವಾರ ಮತ್ತೆ ಪೊಲೀಸರು ರಾಜಾಸಿಂಗ್ ವಿರುದ್ಧ ಪಿಡಿ ಆ್ಯಕ್ಟ್ ದಾಖಲಿಸಿ ಬಂಧಿಸಿದ್ದರು. ಭಾರೀ ಭದ್ರತೆಯ ನಡುವೆ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಚರ್ಲಪಲ್ಲಿ ಜೈಲಿಗೆ ಕರೆದೊಯ್ಯಲಾಯಿತು.

ರಾಜಾಸಿಂಗ್ ಬಂಧನದಿಂದ ಪಾತಬಸ್ತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇನ್ನೊಂದೆಡೆ ಶುಕ್ರವಾರ ಮುಸ್ಲಿಂ ಪ್ರಾರ್ಥನೆ ಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ.

ರ್ಯಾಲಿ, ಧರಣಿಗಳಿಗೆ ಅನುಮತಿ ಇಲ್ಲ ಎಂದು ಪೊಲೀಸರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ವಿಶೇಷವಾಗಿ ಚಾರ್ಮಿನಾರ್ ಮತ್ತು ಮಕ್ಕಾ ಮಸೀದಿ ಪ್ರದೇಶಗಳಲ್ಲಿ ಸಾವಿರಾರು ಮುಸ್ಲಿಮರು ಪ್ರಾರ್ಥನೆಯಲ್ಲಿ ಭಾಗವಹಿಸಲು ಅವಕಾಶವಿರುವುದರಿಂದ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮುಸ್ಲಿಂ ಧರ್ಮಗುರುಗಳು ಮತ್ತು ಪೊಲೀಸರು ಸಾಧ್ಯವಾದಷ್ಟು ಹತ್ತಿರದ ಮಸೀದಿಗಳು ಮತ್ತು ನಿವಾಸಗಳಲ್ಲಿ ಪ್ರಾರ್ಥನೆಗಳನ್ನು ನಡೆಸುವಂತೆ ಮುಸ್ಲಿಮರಿಗೆ ಮನವಿ ಮಾಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!