ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ- ಭೂಕುಸಿತಗಳಿಗೆ ಸಿಲುಕಿ ಕನಿಷ್ಠ ನಾಲ್ವರು ಸಾವನ್ನಪ್ಪಿ ಮತ್ತು 12ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ.
ಭೂಕಂಪವು ಅಬ್ರಾ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಫಿಲಿಪೈನ್ ಇನ್‌ಸ್ಟಿಟ್ಯೂಟ್ ಆಫ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರದ ಮುಖ್ಯಸ್ಥ ರೆನಾಟೊ ಸೊಲಿಡಮ್ ಹೇಳಿದ್ದಾರೆ.
ಅಬ್ರಾದಲ್ಲಿ ಭೂಕಂಪದಿಂದಾಗಿ ಅನೇಕ ಮನೆಗಳು ಮತ್ತು ಕಟ್ಟಡಗಳು ಗೋಡೆಗಳನ್ನು ಬಿರುಕು ಬಿಟ್ಟಿವೆ, ಇನ್ನು ಕೆಲವು ಕಟ್ಟಡಗಳು ಸಂಪೂರ್ಣ ಕುಸಿದಿದ್ದು, ಅಪಾರ ಆಸ್ತಿ ಪಾಸ್ತಿ ಹಾನಿಯನ್ನುಂಟಾಗಿದೆ. ಭಯಭೀತರಾದ ಜನರು ಹೊರಾಂಗಣಕ್ಕೆ ಓಡಿಬಂದಿದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ರಾಜಧಾನಿ ಮನಿಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ