Tuesday, August 16, 2022

Latest Posts

ಕಂದಕಕ್ಕೆ ಉರುಳಿದ್ದ ಟ್ಯಾಂಕರ್ ಮೇಲೆತ್ತಲು ಹರಸಾಹಸ; 6 ಕ್ರೇನ್‌ ಗಳ ಕಾರ್ಯಾಚರಣೆ, 6‌ ತಾಸು ಸಂಚಾರ ಸ್ಥಗಿತ

ಹೊಸದಿಗಂತ ವರದಿ ಯಲ್ಲಾಪುರ :
ತಾಲೂಕಿನ ಅರಬೈಲಿನ ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿ ಕಂದಕಕ್ಕೆ ಮೂರು ದಿನಗಳ ಹಿಂದೆ ಉರುಳಿದ್ದ ಟ್ಯಾಂಕರ್ ಅನ್ನು ಹರಸಾಹಸದಿಂದ ಮೇಲಕ್ಕೆತ್ತಲಾಯಿತು. ಆರು ತಾಸುಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

ಹೆದ್ದಾರಿಯ ಎರಡೂ ಬದಿಗಳಲ್ಲಿ ದೊಡ್ಡ ವಾಹನಗಳು, ಬಸ್‌ಗಳು ಸಾಲುಗಟ್ಟಿ ನಿಂತಿದ್ದವು. ಬೈಕ್‌ ಸವಾರರು ಮತ್ತು ಕಾರುಗಳು ರಾಮಲಿಂಗೇಶ್ವರ ದೇವಸ್ಥಾನದ ಪಕ್ಕದ ರಸ್ತೆಯ ಮೂಲಕ ಸ್ನೇಹಸಾಗರ ವಸತಿ ಶಾಲೆಯ ರಸ್ತೆಯಲ್ಲಿ ಸುತ್ತಿ ಬಳಸಿ. ಹೆದ್ದಾರಿ ಸೇರುವಂತೆ,ಮಾಡಲಾಗಿತ್ತು.

ಸಾಬೂನು ತಯಾರಿಕೆಗೆ ಬಳಸುವ ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಶನಿವಾರ ಬಿದ್ದಿತ್ತು. ಅದನ್ನು ಮೇಲಕ್ಕೆತ್ತಲು ಸಾಧ್ಯವಾಗಿರಲಿಲ್ಲ. ಹೊರ ಜಿಲ್ಲೆಗಳಿಂದ ಒಟ್ಟು ಆರು ಕ್ರೇನ್‌ಗಳನ್ನು ತರಿಸಿ ಕಾರ್ಯಾಚರಣೆ ಮಾಡಲಾಯಿತು.

ಸೋಮವಾರ ಮಧ್ಯಾಹ್ನ 1.30ಕ್ಕೆ ಆರಂಭವಾದ ಕಾರ್ಯಾಚರಣೆಯು ರಾತ್ರಿ ಯವರೆಗೂ ಮುಂದುವರೆದಿತ್ತು . ಎರಡು ಕ್ರೇನ್‌ಗಳ ರೋಪ್ ತುಂಡಾಗಿ ದ್ದರಿಂದ ವಿಳಂಬವಾಯಿತು. ಹೊಸ ರೋಪ್ ತಂದು ಅಳವಡಿಸಿದ ನಂತರ – ಕಾರ್ಯಾಚರಣೆಯನ್ನು ಮುಂದುವರಿ ಸಲಾಯಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಹೆದ್ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದವು.ಇದೀಗ ತೆರವು ಗೊಳಿಸಲಾಗಿದ್ದು ಸಂಚಾರ ಸುಗಮ ವಾಗಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss