ಕೇಜ್ರಿವಾಲರ ಪುಕ್ಕಟೆ ವಿದ್ಯುತ್ ಆಮಿಷ ತಿರಸ್ಕರಿಸಿದ ಗುಜರಾತಿಗಳು- ವಿಡಿಯೊ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಮ್‌ ಆದ್ಮಿ ಪಕ್ಷವು ಜನರಿಗೆ ವಿವಿಧ ಆಮಿಷಗಳನ್ನು ಒಡ್ಡುವ ಮೂಲಕ ಸೆಳೆಯಲು ಮುಂದಾಗಿದೆ. ಇದೇ ಉದ್ದೇಶವನ್ನಿರಿಸಿಕೊಂಡು ʼಉಚಿತ ವಿದ್ಯುತ್‌ʼ ಒದಗಿಸುವುದಾಗಿ ಆಶ್ವಾಸನೆ ನೀಡಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಗುಜರಾತಿಗಳು ಇರಿಸುಮುರಿಸು ತಂದಿದ್ದಾರೆ.
ಸೋಮವಾರ ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ವೇಳೆ, ಗುಜರಾತ್ ಸಹ ದೆಹಲಿ, ಪಂಜಾಬಿಗರಂತೆ ಅಗ್ಗದ- ಉಚಿತ ಹಾಗೂ 24 ಗಂಟೆಗಳ ವಿದ್ಯುತ್ ಪಡೆಯಬಹುದು, ಆದರೆ ಷರತ್ತು ಒಂದೇ ಆಗಿದೆ, ಮತ್ತು ನೀವು ರಾಜಕೀಯ, ಸರ್ಕಾರವನ್ನು ಬದಲಿಸಬೇಕು ಮತ್ತು ಪ್ರಾಮಾಣಿಕ ಎಎಪಿ ಪಕ್ಷವನ್ನು ತರಬೇಕು. ಜನರೇ ನೀವು ಉಚಿತ ವಿದ್ಯುತ್‌ ಬಯಸುತ್ತೀರೋ, ಇಲ್ಲವೇ ಹೇಳಿ ಎಂದು ಸಭಾಸದರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸಭಿಕರು ʼನಮಗೆ ಬೇಡಪ್ಪʼ ಎಂದು ಕೈ ಆಡಿಸುತ್ತಿರುವ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ಈ ಉತ್ತರವನ್ನು ನಿರೀಕ್ಷಿಸಿರದಿದ್ದ ಕೇಜ್ರೀವಾಲ್‌ ಒಂದರೆಕ್ಷಣ ಅವಕ್ಕಾಗಿದ್ದನ್ನು ಕಾಣಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!