ದೆಹಲಿಗೆ ಮಾಲಿನ್ಯ ತಪ್ಪಿದ್ದಲ್ಲ, ಪಂಜಾಬ್‌ನಲ್ಲಿ ಶುರುವಾಯ್ತು ಹುಲ್ಲು ಸುಡುವ ಕಾರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಳಿಗಾಲ ಶುರುವಾದರೆ ಸಾಕು ವಾಯುಮಾಲಿನ್ಯದಿಂದಾಗಿ ದೆಹಲಿ ಜನ ತತ್ತರಿಸುತ್ತಾರೆ. ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೂ ಈ ಋತುವಿನಲ್ಲಾಗುವ ಸಮಸ್ಯೆಗಳನ್ನು ತಪ್ಪಿಸಲು ಮಾತ್ರ ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ದೆಹಲಿ ಸುತ್ತಮುತ್ತಲಿನ ರಾಜ್ಯಗಳಲ್ಲಿ ಹುಲ್ಲು ಸುಡುವಿಕೆ ಕಾರ್ಯವೇ ದೊಡ್ಡ ಸಮಸ್ಯೆಯಾಗಿದೆ.

ಚಳಿಗಾಲದ ಸಮಯಕ್ಕೆ ಫಸಲು ಕೈಗೆ ಬಂದು, ಒಣಗಿದ ಹುಲ್ಲನ್ನು ಆ ಭಾಗದ ರೈತರು ಹೊಲದಲ್ಲಿಯೇ ಸುಡುತ್ತಾರೆ. ಈ ಮಾಲಿನ್ಯ ದೆಹಲಿಯನ್ನಾವರಿಸಿ, ಮಾಲಿನ್ಯಕ್ಕೆ ಕಾರಣವಾಗುತ್ತದೆ. ಅದಾಗಲೇ ಪಂಜಾಬ್‌ನಲ್ಲಿ ರೈತರು ಹುಲ್ಲು ಸುಡುವ ಕಾರ್ಯವನ್ನು ಶುರುವಿಟ್ಟುಕೊಂಡಿದ್ದಾರೆ.

ಇಂದು ಅಮೃತಸರದ ಅಟ್ಟಾರಿ ಗ್ರಾಮದ ಹೊಲವೊಂದರಲ್ಲಿ ಹುಲ್ಲು ಸುಡುತ್ತಿರುವ ದೃಶ್ಯ ಕಂಡುಬಂದಿದೆ. ದೆಹಲಿ ಸರಕಾರ ಹುಲ್ಲು ಸುಡದಂತೆ ಆ ಭಾಗದ ರೈತರಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!