October 9, 2026
Friday, October 9, 2026
spot_img

ನನಗೆ ಜೀವನ ಸಾಕಾಗಿದೆ ಎಂದು ಮೆಸೇಜ್‌ ಕಳಿಸಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಪ್ಪತ್ತು ವರ್ಷದ ವಿದ್ಯಾರ್ಥಿನಿಯೊಬ್ಬಳು ಬೆಂಗಳೂರಿನ ಸದಾಶಿವನಗರದ ಸ್ಯಾಂಕಿ ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಚಿಕ್ಕಬಾಣಾವಾರ ಮೂಲದ ತೇಜು ಮೃತರು. ಸದಾಶಿವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ.

ಸಾಯುವ ನಿರ್ಧಾರಕ್ಕೂ ಮುನ್ನ ತೇಜು ತನ್ನ ಸ್ನೇಹಿತನೊಬ್ಬನಿಗೆ ಈ ಜೀವನ ನನಗೆ ಸಾಕಾಗಿದೆ ಎನ್ನುವ ಸಂದೇಶವನ್ನು ಕಳುಹಿಸಿ ಫೋನ್‌ ಸ್ವಿಚ್‌ ಆಫ್‌ ಮಾಡಿದ್ದಾಳೆ. ಮೇಲ್ನೋಟಕ್ಕೆ ಇದು ಪ್ರೀತಿಯ ವಿಚಾರದ ಜಗಳದಂತೆ ಕಾಣಿಸುತ್ತಿದೆ.

ನಿನ್ನೆಯೇ ತೇಜು ಕೆರೆಗೆ ಹಾರಿ ಪ್ರಾಣಬಿಟ್ಟಿದ್ದು, ಇಂದು ಮೃತದೇಹ ಸಿಕ್ಕಿದೆ. ಪರಿಶೀಲನೆ ನಡೆಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Must Read