ಬೆಂಗಳೂರಿನ ಹಾಸ್ಟೆಲ್ ಶೌಚಾಲಯದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬನ್ನೇರುಘಟ್ಟ ಎಎಂಸಿ ಕಾಲೇಜಿನ ಹಾಸ್ಟೆಲ್ ಶೌಚಾಲಯದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಂಜನಿಯರಿಂಗ್ ಕಾಲೇಜಿನ ಸಿಇಎಸ್ ಪ್ರಥಮ ವರ್ಷದ ವಿದ್ಯಾರ್ಥಿ ನಿತಿನ್ ಹಾಸ್ಟೆಲ್‌ನ ಬಾತ್‌ರೂಂ ನಲ್ಲಿಯೇ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೇರಳ ಮೂಲದ ವಿದ್ಯಾರ್ಥಿಯಾದ ನಿತಿನ್ ಸಾವಿಗೆ ಕಾರಣ ತಿಳಿದುಬಂದಿಲ್ಲ. ತಾಯಿಯನ್ನು ಆಗಾಗ ನೆನೆದು ಪದೇ ಪದೆ ಅವರಿಗೆ ಕಾಲ್ ಮಾಡುತ್ತಿದ್ದ ಎಂದು ಸ್ನೇಹಿತರು ಮಾಹಿತಿ ನೀಡಿದ್ದಾರೆ.

ಬಾತ್‌ರೂಂನಲ್ಲಿ ಬಹಳ ಸಮಯದಿಂದ ನಿತಿನ್ ಬಾಗಿಲು ತೆಗೆದಿಲ್ಲ ಎನ್ನುವ ಶಂಕೆ ಮೇರೆಗೆ ಸ್ನೇಹಿತರು ವಾರ್ಡನ್‌ಗೆ ವಿಷಯ ತಿಳಿಸಿದ್ದಾರೆ. ಬಾತ್‌ರೂಂ ಬಾಗಿಲು ಮುರಿದಾಗ ನಿತಿನ್ ರಕ್ತದ ಮಡುವಿನಲ್ಲಿದ್ದ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!