ಸೆಂಟ್ರಲ್ ಮುಂಬೈ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅನಾಹುತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸೆಂಟ್ರಲ್ ಮುಂಬೈನ ಕರ್ರಿ ರೋಡ್ ಪ್ರದೇಶದ ಬಹುಮಹಡಿ ವಸತಿ ಕಟ್ಟಡದ 14 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅಧಿಕಾರಿಗಳ ಪ್ರಕಾರ ಯಾವುದೇ ಗಾಯ ಅಥವಾ ಪ್ರಾಣ ಹಾನಿಯ ವರದಿಯಾಗಿಲ್ಲ. ಒನ್ ಅವಿಘ್ನ ಪಾರ್ಕ್ ಕಟ್ಟಡದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ಸುದ್ದಿ ವರದಿಗಳ ಪ್ರಕಾರ ಸ್ಥಳದಲ್ಲಿ ಸುಮಾರು 8 ಅಗ್ನಿಶಾಮಕ ಟೆಂಡರ್‌ಗಳಿವೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. “ಇದುವರೆಗೆ, ಘಟನೆಯಲ್ಲಿ ಯಾರೂ ಗಾಯಗೊಂಡ ಬಗ್ಗೆ ಯಾವುದೇ ವರದಿಯಾಗಿಲ್ಲ” ಎಂದು ಅಧಿಕಾರಿ ಹೇಳಿದರು.
ಅಕ್ಟೋಬರ್ 2021 ರಲ್ಲಿ, ಅದೇ ವಸತಿ ಸಂಕೀರ್ಣದ 19 ನೇ ಮಹಡಿಯಲ್ಲಿರುವ ಫ್ಲಾಟ್‌ನಲ್ಲಿ ದೊಡ್ಡ ಬೆಂಕಿ ಅನಾಹುತ ಸಂಭವಿಸಿತ್ತು. ಇದರಲ್ಲಿ 30 ವರ್ಷದ ಭದ್ರತಾ ಸಿಬ್ಬಂದಿ ಇತರರನ್ನು ಉಳಿಸುವಾಗ ಸಾವನ್ನಪ್ಪಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!