Tuesday, March 28, 2023

Latest Posts

ಮತ್ತೊಂದು ದುರಂತ: ರ್ಯಾಗಿಂಗ್‌ ಭೂತಕ್ಕೆ ಮತ್ತೊಬ್ಬ ವಿದ್ಯಾರ್ಥಿನಿ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಂದೆಡೆ ರ್ಯಾಗಿಂಗ್ ಮತ್ತೊಂದೆಡೆ ಸೀನಿಯರ್‌ಗಳ ಕಿರುಕುಳಕ್ಕೆ ಅದೆಷ್ಟೋ ವಿದ್ಯಾರ್ಥಿಗಳು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ನಿನ್ನೆ ಮೆಡಿಕೋ ವಿದ್ಯಾರ್ಥಿನಿ ಪ್ರೀತಿ ಬಲಿಯಾದ ಘಟನೆ ಎಲ್ಲರನ್ನೂ ಕಂಗಾಲಾಗಿಸಿದೆ. ಅಂಥದ್ದೇ ಮತ್ತೊಂದು ಘಟನೆ ನಡೆದಿದೆ. ಹಿರಿಯ ವಿದ್ಯಾರ್ಥಿಯ ಕಿರುಕುಳ ತಾಳಲಾರದೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನರಸಂಪೇಟೆಯ ಜಯಮುಖಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಭೂಪಾಲಪಲ್ಲಿಯ ಶಂಕರಚಾರಿ ಮತ್ತು ರಾಮ ದಂಪತಿಯ ಪುತ್ರಿ ರಕ್ಷಿತಾ ವಾರಂಗಲ್ ಜಿಲ್ಲೆಯ ನರಸಂಪೇಟೆಯಲ್ಲಿರುವ ಜಯಮುಖಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಸಿಇ ಮೂರನೇ ವರ್ಷ ಓದುತ್ತಿದ್ದಾಳೆ. ವಿದ್ಯಾರ್ಥಿನಿ ರಕ್ಷಿತಾ ಮತ್ತೊಬ್ಬ ವ್ಯಕ್ತಿಯೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸೀನಿಯರ್‌ ಆಕೆಯನ್ನು ಮಾನಸಿಕವಾಗಿ ಹಿಂಸೆಗೆ ಗುರಿ ಮಾಡಿ ಮನಬಂದಂತೆ ನಿಂದಿಸಿದ್ದಾನೆ.

ಇದರಿಂದ ಮನನೊಂದ ರಕ್ಷಿತಾ ವಾರಂಗಲ್ ನಗರದ ಸಂಬಂಧಿಕರ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ರಕ್ಷಿತಾ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಜಿಎಂಗೆ ರವಾನಿಸಿದ್ದಾರೆ. ಎರಡು ದಿನಗಳ ಹಿಂದೆ ಭೂಪಾಲಪಲ್ಲಿಯಲ್ಲಿ ರಕ್ಷಿತಾ ನಾಪತ್ತೆ ಪ್ರಕರಣವೂ ದಾಖಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ರಕ್ಷಿತಾ ನಿರ್ಜೀವವಾಗಿ ಪತ್ತೆಯಾಗಿದ್ದಾಳೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!