ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಹಿರಿಯ ರಾಜ್ಯಕಾರಣಿ ಬಿ.ಎಸ್. ಯಡಿಯೂರಪ್ಪ ಜನ್ಮದಿನ. 80ನೇ ವಸಂತಕ್ಕೆ ಬಿಎಸ್‌ವೈ ಕಾಲಿಟ್ಟಿದ್ದು, ರಾಜಕೀಯ ಗಣ್ಯರು ರಾಜಾಹುಲಿ ಎಂದೇ ಖ್ಯಾತರಾದ ಬಿಎಸ್‌ವೈ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಎಸವೈಗೆ ಶುಭಾಶಯ ಕೋರಿದ್ದಾರೆ. ರೈತ ನಾಯಕ, ಹುಟ್ಟು ಹೋರಾಟಗಾರ, ನನ್ನ ನಾಯಕರಾದ ನಿಕಟಪೂರ್ವ ಮುಖ್ಯಮಂತ್ರಿಗಳೇ ಶ್ರೀ ಬಿಎಸ್‌ವೈ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ ನೀಡಿ, ಮತ್ತಷ್ಟು ಜನಸೇವೆ ಮಾಡುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.