ಹೊಸದಿಗಂತ ವರದಿ,ಬಾಗಲಕೋಟೆ:
ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರು ಭೀಕರ ಯುದ್ಧದಲ್ಲಿ ನಾವು ಬದುಕಿ ಮರಳಿ ತಾಯ್ನಾಡಿಗೆ ಹೋಗುತ್ತೇವೆ ಎಂಬ ಭಯದಲ್ಲೇ ದಿನಗಳನ್ನು ಕಳೆಯುತ್ತಿದ್ದೇವು. ಆದರೆ ಭಾರತ ಸರ್ಕಾರದ ಪುಣ್ಯದಿಂದ ಜೀವ ಉಳಿಸಿಕೊಂಡು ನಮ್ಮ ದೇಶಕ್ಕೆ ಬಂದಿದ್ದೇವೆ ಎಂದು ಉಕ್ರೇನ್ದಿಂದ ಬಾಗಲಕೋಟೆಗೆ ಬಂದ ವಿದ್ಯಾರ್ಥಿ ಓವೈಸ್ ಗುಲಬುಗರ್ಾ ಹೇಳಿದರು.
ಉಕ್ರೇನ್ದಿಂದ ಬಾಗಲಕೋಟೆಗೆ ಬಂದ ವಿದ್ಯಾರ್ಥಿ ಓವೈಸ್ ಗುಲಬುರ್ಗಾ ಮನೆಗೆ ಬಂದ ನಂತರ ಉಕ್ರೇನ್ದಲ್ಲಿ ನಡೆಯುತ್ತಿದ್ದ ಯುದ್ಧದ ಭೀಕರತೆಯನ್ನು ಹಂಚಿಕೊಂಡರು. ಬಾಂಬ್ ಸೆಲ್ಟರ್ದಲ್ಲೇ ಆಶ್ರಯವನ್ನು ಪಡೆದಿದ್ದೇವು. ಆದರೆ ನಿತ್ಯ ಅಲ್ಲಿ ನಡೆಯುತ್ತಿದ್ದ ಬಾಂಬ್ ದಾಳಿಯ ಶಬ್ಧ ಕೇಳಿ ನಾವು ನಮ್ಮ ದೇಶಕ್ಕೆ ಹೋಗುತ್ತೇವೆ ಇಲ್ಲವೋ ಎಂಬ ಭಯದಲ್ಲೇ ಇದ್ದೇವು. ಆದರೆ ಭಾರತ ಸರ್ಕಾರ ನಮ್ಮನ್ನು ಕರೆತರಲು ಶಕ್ತಿಮೀರಿ ಪ್ರಯತ್ನ ಮಾಡಿದ್ದು ಸರ್ಕಾರಕ್ಕೆ ಚಿರರುಣಿಯಾಗಿದ್ದೇನೆ ಎಂದು ಹೇಳಿದರು.
ಉಕ್ರೇನ್ದಿಂದ ಮರಳಿ ನಮ್ಮ ತಂದೆ ತಾಯಿ ಸೇರಿದ್ದೇನೆ ಎಂದರೆ ಅದು ಭಾರತ ಸಕರ್ಾರದ ಸಾಕಷ್ಟು ಪ್ರಯತ್ನ ಮಾಡಿದ್ದರ ಪರಿಣಾಮ. ಯುದ್ಧ ನಡೆಯುತ್ತಿರುವ ಸ್ಥಳದಿಂದ ಬಾಗಲಕೋಟೆಗೆ ತಲುಪುವವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾಳಜಿ ವಹಿಸಿದೆ. ಸರ್ಕಾರಕ್ಕೆ ಮತ್ತು ಇಂಡಿಯನ್ ಏರ್ಫೋಸ್ ಹೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ಬಾಂಬ್ ಶೆಲ್ಟರ್ನಲ್ಲಿ ಆಶ್ರಯ ಪಡೆದಿದ್ದೇವು. ಬಾಂಬ್ ಶೆಲ್ಟರದಲ್ಲೇ ಒಂದು ವಾರ ಕಾಲ ಕಳೆದಿದ್ದೇವು. ಒಂದು ವಾರದಲ್ಲಿ ಊಟ, ನೀರು ಕೂಡ ಸರಿಯಾಗಿ ಸಿಗಲಿಲ್ಲ. ಉಕ್ರೇನ್ ರೈಲ್ವೆ ಮೂಲಕ ಪೊಲ್ಯಾಂಡ್ಗೆ ಬಂದು ತಲುಪಿ ದೆಹಲಿ ಮೂಲಕ ಪ್ರಯಾಣ ಆರಂಭಿಸಿ ಬಾಗಲಕೋಟೆಗೆ ಬಂದು ಸೇರಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಉಕ್ರೇನ್ದಲ್ಲಿದ್ದ ವಿಎನ್ ಕರಾಜಿನ್ ನ್ಯಾಷನಲ್ ಮೆಡಿಕಲ್ ಕಾಲೇಜ್ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಓವೈಸ್ ಕಳೆದ ಎರಡು ವರ್ಷಗಳಿಂದ ಉಕ್ರೇನ್ನ ಕಾರ್ಕಿವ್ ನಲ್ಲಿ ನೆಲೆಸಿದ್ದರು. ಉಕ್ರೇನ್ ರಷ್ಯಾ ನಡುವೆ ಯುದ್ಧ ಆರಂಭವಾದಾಗಿನಿಂದ ತುಂಬಾ ದು:ಖದಲ್ಲಿದ್ಧೇವು ಸರ್ಕಾರದ ಪ್ರಯತ್ನದಿಂದ ನಮ್ಮ ಮನೆಗೆ ಮಗ ವಾಪಸ್ ಬಂದಿದ್ದಾನೆ ಸರ್ಕಾರ ಸಾಕಷ್ಟು ಕಾಳಜಿ ತೆಗೆದುಕೊಂಡು ಭಾರತೀಯ ವಿದ್ಯಾರ್ಥಿಗಳು ಗಳನ್ನು ರಕ್ಷಿಸಿದೆ. ಕಷ್ಟದ ಪರಿಸ್ಥಿತಿಯಲ್ಲಿ ಸಕರ್ಾರ ವಿದ್ಯಾರ್ಥಿ ಗ ಳ ನೆರವಿಗೆ ಬಂದಿದೆ.ಇದರ ಜತೆಗೆ ನಮ್ಮ ಮಗನನ್ನು ಕೂಡ ರಕ್ಷಿಸಿದ್ದು ಸರ್ಕಾ ರಕ್ಕೆ ಧನ್ಯವಾದ ವಿದ್ಯಾರ್ಥಿನಿ ಯ ತಂದೆ ಸೈಯದ್ ಇರ್ಷಾದ ಹೇಳಿದರು.