ವಿದ್ಯಾರ್ಥಿಗಳೇ ಗಮನಿಸಿ: ಸಿಇಟಿ ಫಲಿತಾಂಶದ ದಿನಾಂಕ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ವೃತ್ತಿಪರ ಕೋರ್ಸುಗಳಿಗೆ ನಡೆದಿದ್ದ ಸಿಇಟಿ ಪರೀಕ್ಷೆಯ( CET) ) ಫಲಿತಾಂಶ ಇದೇ ಜಲೈ 30 ಪ್ರಕಟವಾಗಲಿದೆ.
ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದ್ದು, https://cetonline.karnataka.gov.in/kea/ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ.
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-2022ರ ಫಲಿತಾಂಶವನ್ನು ಜುಲೈ 30ರಂದು ಪ್ರಕಟಿಸಲಾಗುವುದು. CET ಬರೆದಿದ್ದ CBSE, ICSE ವಿದ್ಯಾರ್ಥಿಗಳು KEA ವೆಬ್‌ಸೈಟ್ ನಲ್ಲಿ ತಮ್ಮ ಅಂಕಗಳನ್ನು ಜು.26ರೊಳಗೆ ಅಪ್ಲೋಡ್ ಮಾಡಲು ಸೂಚಿಸಲಾಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ ಟ್ವೀಟ್ ಮಾಡಿದ್ದಾರೆ.
ಇಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ, ಫಾರ್ಮಸಿ ಮುಂತಾದ ವೃತ್ತಿಪರ ಕೋರ್ಸುಗಳಿಗೆ ಇದೇ 16 ಮತ್ತು 17ರಂದು ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಮತ್ತು 18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆದಿದ್ದವು.ಈ ಬಾರಿ ಒಟ್ಟು 2,16,525 ವಿದ್ಯಾರ್ಥಿಗಳು ಸಿಇಟಿಗೆ ನೊಂದಣಿ ಮಾಡಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!