ಮತ್ತೆ ಎಡವಿದ ರಹಾನೆ- ಪೂಜಾರ: ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ಕೊಡಿ ಎಂದ ಅಭಿಮಾನಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ,ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಎಡವಿದ್ದಾರೆ.

ಮೂರನೇ ಅತೀ ಮುಖ್ಯ ಪಂದ್ಯದಲ್ಲಿಯೇ ನಿರಾಸದಾಯಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದು, ಈ ಕಾರಣ ಇನ್ನು ಮುಂದಾದರು ಬೆಂಚ್​ ಕಾಯುತ್ತಿರುವ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ಕೊಡಿ ಎಂದುಅಭಿಮಾನಿಗಳು, ಕ್ರಿಕೆಟ್​ ವಿಶ್ಲೇಷಕರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡುವ ಮೂಲ ಅಸಮಾಧಾನ ಹೊರಹಾಕಿದ್ದಾರೆ.

ಕೇಪ್​ಟೌನ್​ ಟೆಸ್ಟ್​ನಲ್ಲಿ ಅಜಿಂಕ್ಯ ರಹಾನೆ ಮೊದಲ ಇನ್ನಿಂಗ್ಸ್​ನಲ್ಲಿ ಸೊನ್ನೆ, 2ನೇ ಇನ್ನಿಂಗ್ಸ್​​ನಲ್ಲಿ ಒಂದು ರನ್​ಗೆ ವಿಕೆಟ್​ ಒಪ್ಪಿಸಿದರು. ಇತ್ತ ಪೂಜಾರ ಮೊದಲ ಇನ್ನಿಂಗ್ಸ್​ನಲ್ಲಿ 43 ರನ್​ಗಳಿಸಿದರೂ, ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 9 ರನ್​ಗಳಿಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 6 ಇನ್ನಿಂಗ್ಸ್​ಗಳಲ್ಲಿ ರಹಾನೆ ಕೇವಲ 48, 20, 0, 58, 9, 0 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದಾರೆ. 2020 ಡಿಸೆಂಬರ್​​ನಲ್ಲಿ ಆಸ್ಟ್ರೇಲಿಯಾದಲ್ಲಿ ಶತಕ ಸಿಡಿಸಿದ್ದು ಬಿಟ್ಟರೆ ಆ ಮೇಲೆ ಕಳೆದ 30 ಇನ್ನಿಂಗ್ಸ್​ಗಳಲ್ಲಿ ಕೇವಲ 3 ಅರ್ಧಶತಕ ಸಿಡಿಸಿದ್ದಾರೆ.021ರಲ್ಲಿ 11 ಬಾರಿ ಒಂದಂಕಿ ಮೊತ್ತಕ್ಕೆ ಔಟಾಗಿದ್ದಾರೆ, 6 ಬಾರಿ 20 ರನ್​ಗಳಿಸಲೂ ಕೂಡ ವಿಫಲರಾಗಿದ್ದಾರೆ.

ಅದೇ ರೀತಿ ಪೂಜಾರ ಕೂಡ 2019 ಜನವರಿಯಲ್ಲಿ ಆಸೀಸ್​ ವಿರುದ್ಧ ಕೊನೆಯ ಬಾರಿ ಶತಕ ಸಿಡಿಸಿದ್ದರು. ಆ ಬೇಲಿಕೇ ಒಂದು ಬಾರಿಯೂಶತಕ ಸಿಡಿಸಿಲ್ಲ . ಇನ್ನು 2021ರಲ್ಲಿ ಪೂಜಾರ ಕೂಡ 11 ಬಾರಿ ಒಂದಂಕಿ ಮೊತ್ತಕ್ಕೆ ವಿಕೆಟ್​ ನೀಡಿದ್ದಾರೆ. ಬಾರ್ಡರ್​ ಗವಾಸ್ಕರ್ ಸರಣಿಯಲ್ಲೂ ಹೇಳುವಂತಹ ಯಾವುದೇ ರೀತಿಯ ಪ್ರದರ್ಶನ ನೀಡಿಲ್ಲ.

ಭಾರತದ ತಂಡದ ಅನುಭವ ಬ್ಯಾಟ್ಸ್ ಮ್ಯಾನ್ ಗಳೇ ಅತೀ ಮುಖ್ಯ ಪಂದ್ಯದಲ್ಲಿ ಕೈಗೊಂಡುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಹೀಗಾಗಿ ಮುಂದಿನ ಸರಣಿಯಲ್ಲಾದರೂ ಉತ್ತಮ ಫಾರ್ಮ್​ನಲ್ಲಿದ್ದರುವ ಶ್ರೇಯಸ್​ ಅಯ್ಯರ್, ಹನುಮ ವಿಹಾರಿ, ಶುಬ್ಮನ್​ ಗಿಲ್​ ಅಂತಹ ಯುವ ಆಟಗಾರರಿಗೆ ಅವಕಾಶ ಕೊಟ್ಟುಭಾರತದ ಗೆಲುವಿಗೆ ಸಾಥ್ ನೀಡುವ ತಂಡವನ್ನು ಬಲಿಷ್ಠಗೊಳಿಸಲು ನೆರವಾಗಬೇಕೆಂದು ಸಾಮಾಜಿಕ ಜಾಲಾತಾಣದಲ್ಲಿ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!