ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಹತ್ವದ ಪಂದ್ಯಕ್ಕೆ ಇನ್ನೊಂದು ದಿನ ಸಮಯ ಬಾಕಿ ಉಳಿದಿದೆ. ಇದರ ಮುನ್ನವೇ ಪಾಕಿಸ್ತಾನದ ಕರಾಚಿಯಲ್ಲಿ ಪಂದ್ಯಾವಳಿಗೂ ಮುನ್ನ ಒಂದು ಕುತೂಹಲಕಾರಿಯೊಂದು ಜರುಗಿದೆ.
ಪಾಕಿಸ್ತಾನದ ಲಾಹೋರ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಪಂದ್ಯ ನಡೆಯುತ್ತಿದೆ ಈ ವೇಳೆ ವಿಶೇಷ ಘಟನೆ ನಡೆದಿದೆ. ಇದರಿಂದ ವಿಶ್ವ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ನಗೆ ಪಾಟಲಿಗೀಡಾಗಿದೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಪಂದ್ಯದ ಟಾಸ್‌ನ ಬಳಿಕ ರಾಷ್ಟ್ರಗೀತೆ ಹಾಡುವಾಗ ಪಾಕಿಸ್ತಾನ ಯಡವಟ್ಟು ಮಾಡಿಕೊಂಡಿದೆ. ರಾಷ್ಟ್ರಗೀತೆ ಸಂದರ್ಭದಲ್ಲಿ ಆಸ್ಟ್ರೇಲಿಯಾದ ರಾಷ್ಟ್ರಗೀತೆಯ ಬದಲು ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ನುಡಿಸಲಾಗಿದೆ. ಈ ತಪ್ಪನ್ನು ಬೇಗನೆ ಸರಿಪಡಿಸಲಾಯಿತಾದರೂ, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.