ನನ್ನ ಜೀವನದ ಗ್ರೇಟೆಸ್ಟ್‌ ಬ್ಲೆಸ್ಸಿಂಗ್ ಜಾಗ ಅಂದರೆ….: ಹಳೆ ದಿನಗಳನ್ನು ನೆನಪಿಸಿಕೊಂಡ ಅಣ್ಣಾಮಲೈ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ತಮಿಳುನಾಡು ಬಿಜೆಪಿ ರಾಜಾಧ್ಯಕ್ಷ ಅಣ್ಣಾಮಲೈ ರಾಜಕೀಯಕ್ಕೆ ಬರುವ ಮುನ್ನ ಪೊಲೀಸ್‌ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ವೇಳೆ ಅವರು ಕರ್ನಾಟಕದಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.

ಇಂದು ಅವರು ಕರ್ನಾಟಕ ಬಿಟ್ಟು ತಮಿಳುನಾಡಿಗೆ ಹೋಗಿ ಅಲ್ಲಿನ ರಾಜಕಾರಣದಲ್ಲಿ ಭಾಗಿಯಾಗಿರಬಹುದು. ಆದರೆ ಅವರ ಹೃದಯದಲ್ಲಿ ಇಂದಿಗೂ ತಾವು ಸೇವೆ ಸಲ್ಲಿಸಿದ ಜಾಗ, ಅಲ್ಲಿನ ಜನತೆ, ಅಲ್ಲಿನ ಸಂಸೃತಿ ನೆಲೆ ನಿಂತಿದೆ ಎಂಬುದನ್ನು ಅವರು ನೀಡಿದ ಸಂದರ್ಶನವೊಂದರ ಈ ಭಾಗ ಹೇಳುತ್ತದೆ. ಅದರಲ್ಲೂ ಕರ್ನಾಟಕದ ಒಂದು ತಾಲೂಕನ್ನು “ನನ್ನ ಜೀವನದ ಗ್ರೇಟೆಸ್ಟ್‌ ಬ್ಲೆಸ್ಸಿಂಗ್‌ʼ’ ಎಂದು ನೆನಪಿಸಿಕೊಂಡಿದ್ದಾರೆ.

ಹೌದು, ಉಡುಪಿ ಜಿಲ್ಲೆಯ ಕಾರ್ಕಳ ಜಿಲ್ಲೆಗೆ ನಾನು ಕಾಲಿಟ್ಟಿದ್ದು ಪೊಲೀಸ್‌ ಆಗಿ ನನ್ನ ಮೊತ್ತಮೊದಲ ಅನುಭವ. ಅದೇ ನನಗೆ ದೊಡ್ಡ ಆಶೀರ್ವಾದ. ಅಲ್ಲಿನ ಜನ ತುಂಬಾ ಹೃದಯವೈಶಾಲ್ಯ ಇರುವವರು, ಅಲ್ಲಿನ ಜನರ ಗುಣ ದೊಡ್ಡದು. ಎಷ್ಟೊಂದು ದೈವಭಕ್ತರು ಎಂದು ಅಣ್ಣಾಮಲೈ ನೆನೆದುಕೊಂಡಿದ್ದಾರೆ.

ಅಲ್ಲಿನ ಜನ ಪಂಚಭೂತಗಳಲ್ಲಿ ನಂಬಿಕೆ ಇಟ್ಟುಕೊಂಡವರು, ಮೌನವಾಗಿ ಜೀವನ ನಡೆಸುವವರು. ಕಾರ್ಕಳ ಒಂದು ಸಣ್ಣ ಪೇಟೆ, ಅಲ್ಲಿನ ಜನ ತುಂಬಾ ಸುಸಂಸ್ಕೃತರು. ಅದೆಲ್ಲ ನನ್ನನ್ನು ಒಬ್ಬ ಮನುಷ್ಯನಾಗಿ ರೂಪಿಸಿದವು. ಮೊದಲಿಗೆ ನಾನು ಒಂದು ವರ್ಷ ಎಂಟು ತಿಂಗಳು ಕಾರ್ಕಳದ ಎಎಸ್‌ಪಿಯಾಗಿ ಸೇವೆ ಸಲ್ಲಿಸಿದೆ. ನನಗೆ ಅಲ್ಲಿಂದ ಟ್ರಾನ್ಸ್‌ಫರ್‌ ಆದಾಗ ಜಿಲ್ಲೆಯ ಹಿಸ್ಟರಿಯಲ್ಲೇ ಮೊದಲ ಬಾರಿಗೆ ಅಲ್ಲಿನ ಜನ ನನ್ನನ್ನು ಅಲ್ಲಿಯೇ ಎಸ್‌ಪಿಯಾಗಿ ಉಳಿಸಿಕೊಳ್ಳಲು ಯತ್ನಿಸಿದರು. ಮತ್ತೆ ಎಸ್‌ಪಿಯಾಗಿ ಪ್ರಮೋಷನ್‌ ಪಡೆದು ಅಲ್ಲೇ ಎರಡೂವರೆ ವರ್ಷ ಇದ್ದೆ. ಅಂದರೆ ಒಟ್ಟಾರೆ ನಾಲ್ಕಕ್ಕಿಂತಲೂ ಹೆಚ್ಚು ವರ್ಷ ಕಾರ್ಕಳ ಮತ್ತು ಉಡುಪಿಯಲ್ಲಿ ಸಾರ್ವಜನಿಕ ಸೇವಕನಾಗಿ ಸೇವೆ ಸಲ್ಲಿಸಿದೆ ಎಂದಿದ್ದಾರೆ.

ಅಲ್ಲಿನ ಜನ ಬಡವರು. ಕೆಲವರು ಭೂಮಿ ತಗಾದೆ ಇದೆ ಬನ್ನಿ ಪರಿಹರಿಸಿ ಎನ್ನುತ್ತಿದ್ದರು. ಹಾಗೆ ಅವರು ಬಂದಾಗ ನಾನು ಅವರಲ್ಲಿ ಒಬ್ಬನೆಂದು ಭಾವಿಸುತ್ತಿದ್ದರು. ಕರಾವಳಿಯ ಜನ ಬಹಳ ಧರ್ಮಭಕ್ತರು. ನಾನು ಕೂಡ ದೇವರೆಂದರೆ ಹೆದರುವವನು. ಅವರಿಗೆ ಧಾರ್ಮಿಕತೆ ಎಂಬುದು ಅವರ ದೈನಂದಿನ ಜೀವನದ ಭಾಗ. ಅಲ್ಲಿನ ಭೂತಕೋಲವನ್ನೇ ನೋಡಿ. ಈಗ ಕಾಂತಾರದ ಮೂಲಕ ಅದು ಜಾಗತಿಕ ಮಟ್ಟದಲ್ಲಿ ಹೆಚ್ಚು ಜನಪ್ರಿಯ ಆಗಿದೆ. ಆದರೆ ಅದೆಲ್ಲ ಅವರಿಗೆ ರಕ್ತಗತವಾಗಿ ಬಂದಿದೆ ಎಂದು ಅವರು ನೆನೆದುಕೊಂಡಿದ್ದಾರೆ.

ಅಣ್ಣಾಮಲೈ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಒಬ್ಬರು ನೆಟಿಜನ್‌, ನಾನೂ ಅದೇ ಭಾಗದವನು. ನೀವು ಇದ್ದಾಗ ನಮಗೆ ತುಂಬಾ ಸುರಕ್ಷತೆಯ ಫೀಲ್‌ ಇರುತ್ತಿತ್ತು. ನಿಮ್ಮ ಭಾಷಣ ಎಲ್ಲೇ ಇದ್ದರೂ ನಾನು ಅಲ್ಲಿಗೆ ಹಾಜರಾಗುತ್ತಿದ್ದೆ ಎಂದು ಹೇಳಿದ್ದಾರೆ.

ತುಂಬಾ ಮಂದಿ ಅಣ್ಣಾಮಲೈ ಮಾತನ್ನು ಅನುಮೋದಿಸಿದ್ದಾರೆ. ಕಾರ್ಕಳದಲ್ಲಿ ಇರುವ ಪ್ರವಾಸಿ ತಾಣಗಳದ್ದೇ ಒಂದು ತೂಕವಾದರೆ, ಅಲ್ಲಿನ ಜನರ ಸಂಸ್ಕಾರ- ವಿನಯವಂತಿಕೆಯದ್ದೇ ಇನ್ನೊಂದು ತೂಕ. ಇಲ್ಲಿ ಜೈನರು, ಸಾರಸ್ವತರು, ಬಂಟರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಜೈನರ ಬಸದಿಗಳು ಸಾಕಷ್ಟು ಸಂಖೈಯಲ್ಲಿವೆ. ಕಾರ್ಕಳದ ಗೊಮ್ಮಟೇಶ್ವರ ಬಹಳ ಚಂದ ಮತ್ತು ಜನಪ್ರಿಯ. ಬಂಟರೂ ಸಾಕಷ್ಟು ಸಂಖ್ಯೆಯಲ್ಲಿದ್ದು ಭೂತಸ್ಥಾನಗಳಿದ್ದು, ಭೂತಕೋಲಗಳೂ ನಡೆಯುತ್ತವೆ. ಕಾರ್ಕಳದ ಪಕ್ಕದ ಮೂಡುಬಿದಿರೆ ವಿದ್ಯಾಕ್ಷೇತ್ರವೂ ಆಗಿದೆ. ಕಾರ್ಕಳದ ಸಾರಸ್ವತರ ಊಟ ತಿಂಡಿಯ ರುಚಿ ಮರೆಯುವಂಥದ್ದಲ್ಲ ಎಂದು ಸುಮಾರು ಮಂದಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!