Sunday, October 1, 2023

Latest Posts

ಹಿರಿಯ ಫುಟ್ಬಾಲ್ ಆಟಗಾರ ಸುಭಾಷ್ ಭೌಮಿಕ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಫುಟ್ಬಾಲ್ ತಂಡದ ದಿಗ್ಗಜ, ಸುಭಾಷ್‌ ಭೌಮಿಕ್‌ (72) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ದೀರ್ಘಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದ ಸುಭಾಷ್‌ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
1950ರಲ್ಲಿ ಜನಿಸಿದ ಸುಭಾಷ್‌ ಅವರು ತಮ್ಮ 20ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಪಂದ್ಯ ಆಡಿದರು. ಭಾರತಕ್ಕಾಗಿ 24 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಇವರು 9 ಗೆಲುವು ಗಳಿಸಿಕೊಟ್ಟಿದ್ದಾರೆ.
1970ರಲ್ಲಿ ಏಷನ್‌ ಗೇಮ್ಸ್‌ ನಲ್ಲಿ ಕಂಚಿನ ಪದಕ ಗಳಿಸಿದ ತಂಡದ ಭಾಗವಾಗಿದ್ದರು.
2003ರಲ್ಲಿ ಪೂರ್ವ ಬಂಗಾಳದ ಎಎಸ್‍ಇಎಎನ್ ಪ್ರಶಸ್ತಿ ಹಾಗೂ ರಾಷ್ಟ್ರೀಯ ಲೀಗ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಸುಭಾಷ್‌ ಅವರ ನಿಧನಕ್ಕೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‍ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ಸಂತಾಪ ಸೂಚಿಸಿದ್ದು, ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಭೌಮಿಕ್ ಇನ್ನಿಲ್ಲ ಎಂದು ಕೇಳಲು ದುಃಖವಾಗಿದೆ. ಭಾರತೀಯ ಫುಟ್ಬಾಲ್‍ಗೆ ಅವರ ಅಮೂಲ್ಯ ಕೊಡುಗೆ ಯಾವಾಗಲೂ ನಮ್ಮೊಂದಿಗೆ ಇರುತ್ತದೆ ಹಾಗೂ ಎಂದಿಗೂ ಮರೆಯಲಾಗುವುದಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!