ಯಶಸ್ವಿಯಾದ ಜಾಗತಿಕ ಹೂಡಿಕೆದಾರರ ಸಮಾವೇಶ: ಹರಿದು ಬಂತು 9.81 ಲಕ್ಷ ಕೋಟಿ ರೂ. ಬಂಡವಾಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಳೆದ ಮೂರುದಿನಗಳಿಂದ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶವು ಯಶಸ್ವಿಯಾಗಿದ್ದು ನಿರೀಕ್ಷೆಗೂ ಮೀರಿ 9.81 ಲಕ್ಷ ಕೋಟಿ ರೂ. ಬಂಡವಾಳ ಹರಿದುಬಂದಿದೆ ಎಂದು ಕೈಗಾರಿಕೆ ಸಚಿವರಾದ ಮುರುಗೇಶ್‌ ನಿರಾಣಿ ಹೇಳಿದ್ದಾರೆ.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮೂರುದಿನ ಗಳ ಹೂಡಿಕೆದಾರರ ಸಮಾವೇಶದ ಕುರಿತಾಗಿ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಮಾಹಿತಿಯಲ್ಲಿನ ಕೆಲ ಮುಖ್ಯಾಂಶಗಳು ಇಲ್ಲಿವೆ.

  • ನಿರೀಕ್ಷೆಗೂ ಮೀರಿ ಬಂಡವಾಳ ಹೂಡಿಕೆಯಾಗಿದ್ದು ಒಟ್ಟೂ 9.81 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗೆ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ 2.83ಲಕ್ಷ ಕೋಟಿ ರೂ. ಮೌಲ್ಯದ 608 ಯೋಜನೆಗಳು ಅನುಮೋದನೆಗೊಂಡಿವೆ. ಉಳಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಮುಂದಿನ ಮೂರು ತಿಂಗಳಿನಲ್ಲಿ ಅನುಮೋದನೆ ಸಿಗಲಿದೆ.
  • ದೊಡ್ಡ ಪ್ರಮಾಣದಲ್ಲಿ ಹೂಡಿಕೆದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರ್ಕಾರ ಮತ್ತು ಹೂಡಿಕೆ ಕಂಪನಿಗಳ ನಡುವೆ ತ್ವರಿತ ಸಮನ್ವಯ ಸಾಧಿಸಲು ನೋಡೆಲ್‌ ಅಧಿಕಾರಿಗಳು ಹಾಗೂ ಸಮನ್ವಯ ಸಮಿತಿ ರಚನೆ.
  • ಭೂಸ್ವಾಧೀನ, ಎನ್‌ಓಸಿ ಇತ್ಯಾದಿಗಳ ಸಮಸ್ಯೆ ನಿವಾರಿಸಿ ಪ್ರಕ್ರಿಯೆಗೆ ವೇಗ ಕೊಡಲು ಸಮನ್ವಯ ಸಮಿತಿ ಸಹಾಯ ಮಾಡಲಿದೆ.
  • ಹೂಡಿಕೆಯಾಗಲಿರುವ ಒಟ್ಟು ಮೊತ್ತದಲ್ಲಿ 90 ಶೇಕಡಾದಷ್ಟು ಹೂಡಿಕೆ ಬೆಯಾಂಡ್‌ ಬೆಂಗಳೂರು ಅಂದರೆ ಬೆಂಗಳೂರನ್ನು ಹೊರತು ಪಡಿಸಿ ಹೂಡಿಕೆಯಾಗಲಿದೆ.
  • ಹೂಡಿಕೆದಾರರಿಗೆ ಉತ್ತಮ ಸಂಪರ್ಕಕಲ್ಪಸಲು ಒಟ್ಟೂ 8 ವಿಮಾನ ನಿಲ್ದಾಣಗಳ ಸ್ಥಾಪನೆ ಹಾಗೂ ಉತ್ತಮ ರಸ್ತೆ ಸಂಪರ್ಕದ ವ್ಯವಸ್ತೆಯ ಕುರಿತೂ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
  • ಅಲ್ಲದೇ ಹೈಸ್ಪೀಡ್‌ ರೈಲುಗಳ ಸಂಪರ್ಕ ಕಲ್ಪಿಸಲೂ ಕ್ರಮ ಕೈಗೊಳ್ಳಲಾಗಿದೆ.
  • ಕಾರವಾರ ಮತ್ತು ಮಂಗಳೂರು ಬಂದರುಗಳನ್ನು ಉನ್ನತ ದರ್ಜೆಗೆ ಏರಿಸಿ ಮಾರ್ಪಾಡು ಮಾಡಲಾಗುತ್ತಿದೆ. ಹಾಗೂ ಅಗತ್ಯ ಕೌಶಲ್ಯ ಹೊಂದಿರುವ ಕೆಲಸಗಾರರನ್ನೂ ಒದಗಿಸುವ ಕುರಿತು ಚಿಂತಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!