ಹೊಸದಿಗಂತ ಡಿಜಿಟಲ್ ಡೆಸ್ಕ್
PSLV C54 ಮಿಷನ್‌ನ ಯಶಸ್ವಿ ಉಡಾವಣೆಗಾಗಿ ಇಸ್ರೋ ಮತ್ತು ಎನ್‌ಎಸ್‌ಐಎಲ್ (NSIL) ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, ‘PSLV C54 ಮಿಷನ್‌ನ ಯಶಸ್ವಿ ಉಡಾವಣೆಗಾಗಿ ಇಸ್ರೋ ಮತ್ತು ಎನ್‌ಎಸ್‌ಐಎಲ್ ಗೆ ಅಭಿನಂದನೆಗಳು. EOS-06 ಉಪಗ್ರಹವು ನಮ್ಮ ಕಡಲ ಸಂಪನ್ಮೂಲಗಳ ಬಳಕೆಯನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಭಾರತೀಯ ಕಂಪನಿಗಳಿಂದ 3 ಉಪಗ್ರಹಗಳನ್ನು ಉಡಾವಣೆ ಮಾಡಿದರು. ಪಿಕ್ಸೆಲ್ ಪೀಸ್ (PixxelSpace) ಮತ್ತು ದ್ರುವ ಸ್ಪೇಸ್ (DhruvaSpace) ಹೊಸ ಯುಗದ ಆರಂಭವನ್ನು ಸೂಚಿಸುತ್ತವೆ. ಈ ಮೂಲಕ ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಭಾರತೀಯ ಪ್ರತಿಭೆಯನ್ನು ಸಂಪೂರ್ಣವಾಗಿ ಅರಿತುಕೊಳ್ಳಬಹುದು. ಈ ಉಡಾವಣೆಯಲ್ಲಿ ಭಾಗವಹಿಸಿದ ಎಲ್ಲಾ ಕಂಪನಿಗಳಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಭೂ ವೀಕ್ಷಣಾ ಉಪಗ್ರಹ EOS-06 ಸೇರಿದಂತೆ ಎಲ್ಲಾ 9 ಉಪಗ್ರಹಗಳನ್ನು ಇಸ್ರೋ ಇಂದು ಯಶಸ್ವಿಯಾಗಿ ಬಹು ಕಕ್ಷೆಗಳಲ್ಲಿ ಸೇರಿದಿದೆ.