ಶಬರಿಮಲೆಯಲ್ಲಿ ಹಠಾತ್ ಕಾಡ್ಗಿಚ್ಚು: ಕಣ್ಣೆದುರೇ ಧಗಧಗಿಸಿ ಭಸ್ಮವಾಗುತ್ತಿದೆ ಅರಣ್ಯ ಸಂಪತ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆ ಅರಣ್ಯ ಪ್ರದೇಶದಲ್ಲಿ ಹಠಾತ್ ಕಾಡ್ಗಿಚ್ಚು ವ್ಯಾಪಿಸುತ್ತಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ.
ಇಲ್ಲಿನ ಕೊಲ್ಲಂಕುನ್, ತೇವರ್ಮಲಾ, ನನ್ಪನ್‌ಪಾರಾ ಕೋಟಾದಲ್ಲಿ ಕಾಡ್ಗಿಚ್ಚು ಧಗಧಗಿಸುವ ದೃಶ್ಯಗಳು ಭಯಹುಟ್ಟಿಸುತ್ತಿವೆ.

ಇನ್ನು ಬೆಂಕಿ ನಂದಿಸಲು ಅರಣ್ಯ ಇಲಾಖೆ ಕೈಗೊಳ್ಳುತ್ತಿರುವ ಶ್ರಮ ಕೂಡಾ ವ್ಯರ್ಥವಾಗುತ್ತಿದೆ. ನಿಯಂತ್ರಣಕ್ಕೆ ಸಿಗದ ಬೆಂಕಿ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸುತ್ತಿದೆ.

ಈ ನಡುವೆ ಫೈರ್ ಲೈನ್ ಸರಿಯಾಗಿ ಕಾರ್ಯ ನಿರ್ವಹಿಸದಿರುವುದು ಕಾಡ್ಗಿಚ್ಚು ವ್ಯಾಪಿಸಲು ಕಾರಣ ಎಂಬ ದೂರುಗಳು ಕೇಳಿಬಂದಿವೆ. ಹಣದ ಕೊರತೆಯಿಂದ ಅರಣ್ಯ ಇಲಾಖೆ ಫೈರ್ ಲೈನ್ ಕಾಮಗಾರಿ ಸರಿಯಾಗಿ ಮಾಡಿಲ್ಲ. ಬೇಸಿಗೆಯಲ್ಲಿ ಫೈರ್ ಲೈನ್ ಬೆಳಗದಿರುವುದು ಈ ಅನಾಹುತಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!