ಹಾಸನದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ದಿಢೀರ್‌ ದಾಳಿ: ಏಳು ಲಕ್ಷಕ್ಕೂ ಹೆಚ್ಚು ಮೊತ್ತದ ಮದ್ಯ ವಶ

ದಿಗಂತ ವರದಿ ಹಾಸನ :

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ನಂತರ ವಿವಿಧೆಡೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಒಟ್ಟು 73.67 ಲಕ್ಷ ರೂ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಹಾಸನ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಮಾ.16 ರಿಂದ ಮಾ.31 ರವರೆಗೆ ಅಕ್ರಮ ಮದ್ಯ ಉತ್ಪಾದನೆ, ಸಾಗಾಣೆ, ಮಾರಾಟ ಸೇರಿ ಒಟ್ಟು 682 ಪ್ರಕರಣಗಳು ದಾಖಲು ಮಾಡಿದ್ದಾರೆ. ಹಾಸನ ವಲಯ-1 ರಲ್ಲಿ ಒಟ್ಟು 59, ಹಾಸನ ವಲಯ-2 ರಲ್ಲಿ ಒಟ್ಟು 151
ಬೇಲೂರು ತಾಲ್ಲೂಕಿನಲ್ಲಿ 59, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 55, ಅರಸೀಕೆರೆಯಲ್ಲಿ 75, ಸಕಲೇಶಪುರದಲ್ಲಿ 75, ಅರಕಲಗೂಡಿನಲ್ಲಿ 134, ಹೊಳೆನರಸೀಪುರದಲ್ಲಿ 74 ಪ್ರಕರಣ ದಾಲಿಸಿಕೊಂಡಿದ್ದು, ಒಟ್ಟು ಜಿಲ್ಲೆಯಲ್ಲಿ ವಿವಿಧ ಅಬಕಾರಿ ಅಧಿಕಾರಿಗಖು 682 ಪ್ರಕರಣಗಳನ್ನು ದಾಲಿಸಿದ್ದಾರೆ.

ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಅಪರಾಧಗಳಿಗೆ ಸಂಬಂಧಿಸಿದಂತೆ 563 ಪ್ರಕರಣಗಳು, ಮದ್ಯದಂಗಡಿಗಳಲ್ಲಿ ಅಕ್ರಮವಾಗಿ ಸನ್ನದು ಷರತ್ತುಗಳ ಉಲ್ಲಂಘನೆಗೆ 32 ಪ್ರಕರಣ ದಾಖಲು, ಗಾಂಜಾ ಸೇವನೆ 10 ಪ್ರಕರಣ ದಾಖಲು, ಇದುವರೆಗಿನ ಕಾರ್ಯಾಚರಣೆಯಲ್ಲಿ 3,343 ಲೀಟರ್ ಮದ್ಯ, 561 ಲೀಟರ್ ಬಿಯರ್, 34 ಲೀಟರ್ ವೈನ್, 14 ಲೀಟರ್ ಸೇಂದಿ ವಶಪಡಿಸಿಕೊಂಡು, 36 ವಿವಿಧ ವಾಹನಗಳು ಜಪ್ತಿ ಮಾಡಿಕೊಂಡು 652 ಆರೋಪಿಗಳನ್ನು ದಸ್ತಗಿರಿ ಮಾಡಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!