October 9, 2026
Friday, October 9, 2026
spot_img

ದೊಡ್ಮನೆಯಲ್ಲಿ ದಿಢೀರ್ ಟ್ವಿಸ್ಟ್: ಆರೋಗ್ಯ ಸಮಸ್ಯೆಯಿಂದ ಬಿಗ್ ಬಾಸ್ ಮನೆ ತೊರೆದ ಓಂ ಪ್ರಕಾಶ್ ರಾವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಬಿಗ್ ಬಾಸ್ ಸೀಸನ್ 13 ಶುರುವಾಗಿ ಕೆಲವೇ ದಿನಗಳಾಗಿವೆ ಅಷ್ಟರಲ್ಲಾಗಲೇ ಓರ್ವ ಸ್ಪರ್ಧಿಗೆ ಅರೋಗ್ಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆ ಸೇರಿದ್ದಾರೆ.

ಹೌದು! ಖ್ಯಾತ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅನಾರೋಗ್ಯದ ಕಾರಣ ನಿನ್ನೆ ಆಸ್ಪತ್ರೆ ಸೇರಿದ್ದು, ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರಬಂದಿದ್ದಾರೆ. ಈಗ ಈ ಕುರಿತು ಕಲರ್ಸ್ ಕನ್ನಡ ಅಧಿಕೃತ ಮಾಹಿತಿ ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ‘DISCONTINUED’ ಎಂಬ ಪೋಸ್ಟರ್ ಹಂಚಿಕೊಂಡಿದೆ.

ಓಂ ಪ್ರಕಾಶ್ ರಾವ್ ಗೆ ಏನಾಗಿತ್ತು?

ಬಿಗ್ ಬಾಸ್ ಮನೆಗೆ ಬರೋ ಮುಂಚೆನೇ ಓಂ ಪ್ರಕಾಶ್ ರಾವ್ ಕಾಲಿಗೆ ಪೆಟ್ಟಾಗಿತ್ತು ಎನ್ನಲಾಗಿದೆ. ಮನೆಯೊಳಗೆ ಇದ್ದ ಸಂದರ್ಭದಲ್ಲಿ ಕಾಲಿನ ನೋವು ಮತ್ತಷ್ಟು ಹೆಚ್ಚಾಗಿದ್ದು, ಇದರಿಂದ ಆರೋಗ್ಯದಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:

ಹೆಚ್ಚಿನ ತಪಾಸಣೆ ಹಾಗೂ ಚಿಕಿತ್ಸೆಯ ಅಗತ್ಯವಿದ್ದರೆ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಕಲರ್ಸ್ ಕನ್ನಡದ ‘DISCONTINUED’ ಪೋಸ್ಟ್‌ನೊಂದಿಗೆ ಓಂ ಪ್ರಕಾಶ್ ರಾವ್ ಅವರ ಬಿಗ್ ಬಾಸ್ ಪಯಣ ಸದ್ಯಕ್ಕೆ ಅಂತ್ಯಗೊಂಡಿದ್ದು, ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

Must Read