ಏಕಾಏಕಿ 50 ಮೀಟರ್ ಹಿಂದಕ್ಕೆ ಸರಿದ ಸಾಗರ: ಕೇರಳದಲ್ಲಿ ಆತಂಕ ಹುಟ್ಟಿಸಿದೆ ವಿಲಕ್ಷಣ ವಿದ್ಯಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕೇರಳದ ಪುರಕ್ಕಾಡ್‌ನಲ್ಲಿ ಸಮುದ್ರವು ಏಕಾಏಕಿ ತೀರದಿಂದ ಸುಮಾರು 50 ಮೀಟರ್ ಸಮುದ್ರ ಹಿಂದೆ ಸರಿದಿದೆ!

ಮಂಗಳವಾರ ಈ ವಿಚಿತ್ರ ವಿದ್ಯಮಾನ ನಡೆದಿದ್ದು, ಯಾವುದೇ ಅಪಾಯ ಉಂಟಾಗಿಲ್ಲವಾದರೂ ಈ ಬೆಳವಣಿಗೆ ತೀರದ ನಿವಾಸಿಗಳಿಗೆ ನಿದ್ದೆಯಿಲ್ಲದಂತೆ ಮಾಡಿದೆ. ರಾತ್ರಿ ವೇಳೆ ಅಲೆಗಳ ಅಬ್ಬರ ಜೋರಾಗಿರುತ್ತದೆ. ಮುಂಜಾನೆ ವೇಳೆ ಇಂತಹ ವಿದ್ಯಮಾನ ಕಂಡು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಹಿಂದೆ ಎರಡು ಬಾರಿ ಇದೇ ರೀತಿ ನಡೆದಿತ್ತು ಎಂದು ಸ್ಥಳೀಯ ಮೀನುಗಾರರು ನೆನಪಿಸಿಕೊಂಡಿದ್ದಾರೆ.

ಪುರಕ್ಕಾಡ್‌ನಿಂದ ದಕ್ಷಿಣಕ್ಕೆ 300 ಮೀಟರ್ ದೂರದಲ್ಲಿ ಈ ವಿದ್ಯಮಾನ ನಡೆದಿದೆ.ಸಮುದ್ರ ಹಿಂದಕ್ಕೆ ಸರಿದಿರುವ ಕಾರಣ ದಡದಲ್ಲಿ ಹೂಳು ತುಂಬಿರುವುದರಿಂದ ಪುರಕ್ಕಾಡ್ ಕರಾವಳಿಗೆ ಮೀನುಗಾರಿಕಾ ದೋಣಿಗಳು ಬರಲು ಸಾಧ್ಯವಾಗುತ್ತಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!