CINE | ಅನುಪ್‌ ಭಂಡಾರಿ ಜೊತೆ ಸುದೀಪ ಹೊಸ ಸಿನಿಮಾ, ಹೆಸರು ಕೇಳೋಕೆ ಸ್ವಲ್ಪ ಕಾಯ್ಬೇಕಷ್ಟೇ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅನೂಪ್ ಭಂಡಾರಿ ಅವರು ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ನಿರ್ದೇಶನ ಮಾಡಿದ್ದರು. ಈಗ ಅವರು ಮತ್ತೊಮ್ಮೆ ಕಿಚ್ಚನ ಜೊತೆ ಕೈ ಜೋಡಿಸಿದ್ದಾರೆ.

ಸುದೀಪ್ ಬರ್ತ್​ಡೇ ದಿನ ಹೊಸ ಸಿನಿಮಾ ಘೋಷಣೆ ಆಗಲಿದೆ. ಈ ಬಗ್ಗೆ ಅನೂಪ್ ಭಂಡಾರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಇದು ‘ಬಿಲ್ಲ ರಂಗ ಭಾಷ’ ಸಿನಿಮಾ ಕುರಿತ ಅಪ್​ಡೇಟ್ ಇರಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ.

ಅನೂಪ್ ಭಂಡಾರಿ ಅವರು ‘ರಂಗಿ ತರಂಗ’ ಸಿನಿಮಾ ಮೂಲಕ ಎಲ್ಲರ ಮೆಚ್ಚುಗೆ ಪಡೆದರು. ಆ ಬಳಿಕ ‘ರಾಜರಥ’ ಹೆಸರಿನ ಸಿನಿಮಾ ಮಾಡಿದರು. ಇದಾದ ಬಳಿಕ ಸುದೀಪ್ ಜೊತೆ ಸೇರಿ ಅವರು ‘ವಿಕ್ರಾಂತ್​ ರೋಣ’ ಸಿನಿಮಾ ಮಾಡಿದರು. ಈ ಚಿತ್ರ ಯಶಸ್ಸು ಕಂಡ ಬಳಿಕ ಮತ್ತೊಮ್ಮೆ ಅವರು ಅನೂಪ್ ಜೊತೆ ಕೆಲಸ ಮಾಡಲು ಮುಂದಾಗಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!