BOLLYWOOD| ಎಲ್ಲಾ ಸೆಲೆಬ್ರಿಟಿಗಳಿಗೂ‌ ಆಲಿಯಾ ಒಳ್ಳೆಯ ಸಂದೇಶ ಕೊಟ್ಟಿದ್ದಾರೆ- ಸುಹಾನಾ ಖಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿನಿ ತಾರೆಯರು ಒಂದು ಬಾರಿ ಹಾಕಿದ ಬಟ್ಟೆ ಮತ್ತೊಮ್ಮೆ ಧರಿಸುವುದು ತುಂಬಾ ಅಪರೂಪ. ಅದರಲ್ಲೂ ತಮ್ಮ ಮದುವೆ ಉಡುಪನ್ನು ಮತ್ತೊಮ್ಮೆ ಹಾಕಿರುವುದು ಕೇಳಿರದ ಸಂಗತಿ. ಇತ್ತೀಚೆಗೆ ಆಲಿಯಾ ಭಟ್‌ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ತಮ್ಮ ಮದುವೆಯ ಸೀರೆಯನ್ನು ಧರಿಸಿ ಬಂದಿರುವುದರ ಬಗ್ಗೆ ಎಲ್ಲಾ ಕಡೆ ಹರಿದಾಡುತ್ತಿದೆ. ಇದಕ್ಕೆ ಬಾಲಿವುಡ್‌ ಬಾದ್‌ ಶಾ ಶಾರೂಕ್‌ ಪುತ್ರಿ ಸುಹಾನಾ ಖಾನ್‌ ಪ್ರತಿಕ್ರಿಯಿಸಿದ್ದಾರೆ.

‘ದಿ ಆರ್ಚೀಸ್’ ಚಿತ್ರದ ಸಂದರ್ಶನದ ವೇಳೆ ಈ ಬಗ್ಗೆ ಮಾತನಾಡಿದ ಸುಹಾನಾ..ʻಸಾಮಾನ್ಯವಾಗಿ ಬಹುತೇಕ ತಾರೆಯರು ಬಳಸಿದ ಬಟ್ಟೆ ಮತ್ತೊಮ್ಮೆ ಬಳಸಲು ಇಷ್ಟಪಡುವುದಿಲ್ಲ. ʻಇಲ್ಲಿ ಎಲ್ಲರೂ ಒನ್‌ ಟೈಂ ಯೂಸ್‌ʼ ಎಂಬ ಪದ್ದತಿಯನ್ನೇ ಅನುಸರಿಸುವವರು ಹೆಚ್ಚು. ಹೀಗಿರವಾಗ ಆದರೆ ಆಲಿಯಾ, ಈ ಪದ್ದತಿಯನ್ನು ಮುರಿಯಲು ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ರೀ ಯೂಸ್ ಡ್ರೆಸ್ ನಲ್ಲಿ ತೆರಳಿ ಉತ್ತಮ ಸಂದೇಶ ನೀಡಿದ್ದಾರೆ. ಒಂದು ಹೆಜ್ಜೆ ಮುಂದೆ ಇಟ್ಟು ಎಲ್ಲಾ ಸೆಲಬ್ರೆಟಿಸ್‌ಗೆ ಆದರ್ಶವಾಗಿ ನಿಂತಿದ್ದಾರೆ. ಮರುಬಳಕೆ ಈಗ ಅಗತ್ಯವಾಗಿದೆ ಮತ್ತು ಪರಿಸರ ಸಂರಕ್ಷಣೆಗೆ ಈ ವಿಧಾನವು ಅವಶ್ಯಕವಾಗಿದೆʼ ಎಂದು ಅವರು ಆಲಿಯಾ ಅವರನ್ನು ಶ್ಲಾಘಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!