July 29, 2026
Wednesday, July 29, 2026
spot_img

ಇರಾಕ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಆತ್ಮಾಹುತಿ ದಾಳಿ: ಮುಂಬೈ ಮೂಲದ ಎಂಜಿನಿಯರ್‌ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾಕ್‌ ನ ಜಲಪ್ರದೇಶದಲ್ಲಿ US ಧ್ವಜವಿದ್ದ ಸೇಫ್‌ ಸಿ ವಿಷ್ಣು ಎಂಬ ತೈಲ ಟ್ಯಾಂಕರ್‌ ಮೇಲೆ ಇರಾನ್ ಮೂಲದ ಸೂಸೈಡ್‌ ದೋಣಿಯ ಮೂಲಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಟ್ಯಾಂಕರ್‌ ನಲ್ಲಿದ್ದ ಭಾರತೀಯ ಪ್ರಜೆಯೊಬ್ಬ ಸಾವನ್ನಪ್ಪಿದ್ದಾರೆ.

ಮುಂಬೈನ ಕಂಡಿವಲಿ ಪೂರ್ವದ ನಿವಾಸಿ ದೇವಾನಂದನ್‌ ಪ್ರಸಾದ್‌ ಸಿಂಗ್‌ (50) ಮೃತರು. ಇವರು ಅಮೆರಿಕ ಸ್ವಾಮ್ಯದ ಕಚ್ಚಾ ತೈಲ ಟ್ಯಾಂಕರ್‌ ಸಫೇಸಿಯಾ ವಿಷ್ಣುದಲ್ಲಿ ಹೆಚ್ಚುವರಿ ಮುಖ್ಯ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ದೇವಾನಂದನ್‌ ಪ್ರಸಾದ್‌ ಸಿಂಗ್‌ ಅವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ 2019ರಲ್ಲಿ ಬಿಹಾರದಿಂದ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಸಾಗರ ಎಂಜಿನಿಯರ್‌ ಆಗಿದ್ದ ಅವರು ಸರಕು ಹಡಗುಗಳಲ್ಲಿ ಸಣ್ಣ ಸಿಬ್ಬಂದಿಯೊಂದಿಗೆ ಪ್ರಯಾಣಿಸಿ ಅವರನ್ನು ನೋಡಿಕೊಳ್ಳುತ್ತಿದ್ದರು.

ಆ ತೈಲ ಟ್ಯಾಂಕರ್ ಡಿಕ್ಕಿ ಹೊಡೆದಾಗ ಸುಮಾರು 48,000 ಮೆಟ್ರಿಕ್ ಟನ್ ನಾಫ್ತಾ ಸಾಗಿಸುತ್ತಿತ್ತು. ತೈಲ ಟ್ಯಾಂಕರ್ ಮೇಲಿನ ದಾಳಿಯ ನಂತರ ದೇವಾನಂದನ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ. ಹಡಗಿನಿಂದ ಇತರ 15 ಭಾರತೀಯರನ್ನು ರಕ್ಷಿಸಲಾಗಿತ್ತು.

ದೇವಾನಂದನ್ ಸಿಂಗ್ ಈ ಹಿಂದೆ ನಿಯೋಮ್ ಮ್ಯಾರಿಟೈಮ್, ಯುನೈಟೆಡ್ ಓಷನ್ ಶಿಪ್ ಮ್ಯಾನೇಜ್‌ಮೆಂಟ್, ಬರ್ನಾರ್ಡ್ ಶುಲ್ಟೆ ಶಿಪ್ ಮ್ಯಾನೇಜ್‌ಮೆಂಟ್, ಸ್ಯಾಮ್ಸನ್ ಮ್ಯಾರಿಟೈಮ್ ಮತ್ತು ಶಿಪ್ಪಿಂಗ್ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !