ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಪರೀಕ್ಷೆಗಳನ್ನು ಎರಡು ತಿಂಗಳು ಮುಂದೂಡಲು ಸರ್ಕಾರ ನಿರ್ಧರಿಸಿದೆ.
ಅಷ್ಟೇ ಅಲ್ಲದೆ ವಿದ್ಯಾರ್ಥಿಗಳು ಅರ್ಧ ದಿನ ಓದಲಿ, ಇನ್ನರ್ಧ ದಿನ ತಮ್ಮಿಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಈ ಬಗ್ಗೆ ಸರ್ಕಾರದ ಸಮಿತಿ ಸಭೆ ನಡೆಸಿದ್ದು, ನಿರ್ಧಾರಗಳನ್ನು ಕೈಗೊಂಡಿದೆ. ಕೋರ್ಸ್ಗಳ ಹೊರೆ ಕಡಿತಗೊಳಿಸಲು ವಿಶೇಷ ತಜ್ಞರ ಸಮಿತಿ ರಚಿಸುವಂತೆ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಇನ್ನು ತಜ್ಞರಿಂದ ಆನ್ಲೈನ್ ಕ್ಲಾಸ್ ನಡೆಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವಂತೆ ಸಂಸ್ಥೆಗಳಿಗೆ ಕೇಳಲಾಗಿದೆ.
ಸಾಮಾನ್ಯ ಪರೀಕ್ಷೆಗೆ ಬಾರದವರು ಹಾಗೂ ಕಡಿಮೆ ಅಂಕ ತೆಗೆದವರ ಮಾನಸಿಕ ಸ್ಥಿತಿ ಬಗ್ಗೆ ಗಮನ ಇಡುವಂತೆ ಸೂಚಿಸಲಾಗಿದೆ. ಒಟ್ಟಾರೆ ಈ ವರ್ಷ 23 ನೀಟ್ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.