ಬೆಳ್ಳಿತೆರೆಯಲ್ಲಿ ಮೂಡಿ ಬರಲಿದೆ ಸುಕೇಶ್-ಜಾಕ್ವೆಲಿನ್ ಪ್ರೇಮ್ ಕಹಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಇತ್ತೀಚಿನ ದಿನಗಳಲ್ಲಿ ನೈಜ ಕಥೆ ಆದರಿಸಿ ಸಿನಿಮಾಗಳು ಮೂಡಿ ಬರುತ್ತಿದೆ. ಇಂತಹ ಸಿನಿಮಾಗಳನ್ನ ನೋಡಲು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಹೀಗಿರುವಾಗ ಇದೀಗ ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ (Sukesh Chandrashekhar) ಕಥೆಯನ್ನೇ ಸಿನಿಮಾ ಮಾಡಲು ಬಿಟೌನ್ ನಿರ್ದೇಶಕರೊಬ್ಬರು ಮುಂದಾಗಿದ್ದಾರೆ.

ಕೋಟಿ ಕೋಟಿ ಲೂಟಿ ಮಾಡಿದ್ದ ಸುಕೇಶ್, ಬಾಲಿವುಡ್ (Bollywood) ನಟಿಮಣಿಯರನ್ನ ಬುಟ್ಟಿಗೆ ಹಾಕಿಕೊಂಡ ಕಥೆ ಸಿನಿಮಾ ಮಾಡ್ತಿದ್ದಾರೆ.
ಸುಕೇಶ್​ನ ವಂಚನೆ ಪ್ರಕರಣಗಳ ಜೊತೆಗೆ ಅವನ ಹಾಗೂ ನಟಿ ಜಾಕ್ವೆಲಿನ್ ಫರ್ನಾಂಡೀಸ್​ನ (Jacqueline Fernandez) ಪ್ರೇಮ ಪ್ರಕರಣವನ್ನು ಮುಖ್ಯವಾಗಿರಿಸಿಕೊಂಡು ಸಿನಿಮಾವನ್ನು ಕಟ್ಟಲು ಬಾಲಿವುಡ್ ನಿರ್ದೇಶಕರೊಬ್ಬರು ರೆಡಿಯಾಗಿದ್ದಾರೆ.

ತಿಹಾರ್ ಜೈಲಿನ ಜೈಲರ್ ದೀಪಕ್ ಶರ್ಮಾ (Deepak Sharma) ಅವರನ್ನ ಇತ್ತೀಚಿಗೆ ನಿರ್ದೇಶಕ ಆನಂದ್ ಕುಮಾರ್ (Anand Kumar) ಭೇಟಿಯಾಗಿದ್ದಾರೆ. ಸುಕೇಶ್‌ನ ಕಥೆಯನ್ನು ಸಿನಿಮಾ ಮಾಡಲು ಯೋಜನೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ದೀಪಕ್ ಶರ್ಮಾ ಅವರು ನಿರ್ದೇಶಕ ಆನಂದ್ ಜೊತೆಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡಿದೆ.

ಆನಂದ್ ಕಳೆದೊಂದು ವರ್ಷದಿಂದಲೂ ಸುಕೇಶ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಸುಕೇಶ್ ವಿರುದ್ಧದ ಚಾರ್ಜ್‌ಶೀಟ್‌ಗಳು, ಹೇಳಿಕೆಗಳು ಇತರೆ ವಿಷಯಗಳನ್ನು ಸಂಗ್ರಹಿಸಿ ಅವುಗಳ ಮಾಹಿತಿ ಆಧರಿಸಿ ಕತೆಯನ್ನು ಸಿದ್ಧಪಡಿಸುತ್ತಿದ್ದಾರೆ. ಸುಕೇಶ್‌ರ ಕೆಲ ಆಪ್ತರನ್ನು ಸಹ ಆನಂದ್ ಈಗಾಗಲೇ ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವು ಸುಕೇಶ್‌ನ ಜೀವನದ ವಿಷಯಗಳ ಬಗ್ಗೆ ಇರಲಿದ್ದು, ಜಾಕ್ವೆಲಿನ್ ಫರ್ನಾಂಡಿಸ್ ರಿಯಲ್ ಕಥೆ ಸಿನಿಮಾದ ಪ್ರಧಾನ ಅಂಶವಾಗಿರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!