ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಖೇಶ್ ಚಂದ್ರಶೇಖರ್ ಜೈಲಿನಲ್ಲಿದ್ದುಕೊಂಡೇ ಗೆಳತಿ ಜಾಕ್ವೆಲೀನ್ ಫರ್ನಾಂಡಿಸ್‌ಗೆ ಲವ್ ಲೆಟರ್ ಬರೆದಿದ್ದಾರೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಇನ್ನೂ ಈ ಸಮಸ್ಯೆ ಮುಗಿದಿಲ್ಲ.
ಇದೀಗ ಸುಖೇಶ್ ಹೋಳಿ ಹಬ್ಬದ ವಿಶ್ ಮಾಡಿ ಐಲವ್‌ಯೂ ಬೇಬಿ ಎಂದು ಲೆಟರ್ ಬರೆದಿದ್ದಾರೆ. ನನ್ನ ಬ್ಯೂಟಿಫುಲ್ ಜಾಕ್ವೆಲಿನ್‌ಗೆ ಹೋಳಿ ಹಬ್ಬದ ಶುಭಾಷಯಗಳು, ಇದು ಬಣ್ಣಗಳ ಹಬ್ಬ, ಮರೆಯಾದ ಬಣ್ಣಗಳು ಮತ್ತೆ ನಿನ್ನ ಜೀವನದಲ್ಲಿ ಬರಬೇಕು, ನಿನ್ನ ಜೀವನ ಬೆಳಕಾಗಬೇಕು, ಅದು ನನ್ನ ಜವಾಬ್ದಾರಿ, ಲವ್ ಯೂ ಮೈ ಬೇಬಿ ಗರ್ಲ್ ಯಾವಾಗಲೂ ನಗುತ್ತಿರು. ನೀನು ನನ್ನ ಪ್ರಿನ್ಸಸ್, ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ತೇನೆ ಎಂದು ಸುಖೇಶ್ ಬರೆದಿದ್ದಾರೆ.