ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಿದ್ರೆ ಅವರನ್ನು ಎದುರಿಸೋ ಶಕ್ತಿ ನಮಗಿದೆ, ಸ್ವಾರ್ಥದ ರಾಜಕಾರಣಿಗಳಿಗೆ ಉತ್ತರ ಕೊಡೋ ಟೈಮ್ ಬಂದಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿಗೆ ನನ್ನ ಬೆಂಬಲ ಎಂದು ಸುಮಲತಾ ಘೋಷಣೆ ಮಾಡಿದ್ದರು, ಇದೀಗ ಟಿಕೆಟ್ ಬಗ್ಗೆ ಸುಮಲತಾ ಮಾತನಾಡಿದ್ದಾರೆ. ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧಿಸ್ತಾರೆ ಅನ್ನೋ ಮಾತು ಕೇಳಿದೆ, ಇದು ನಿಜವೇ ಆದರೆ ಪಕ್ಷ ಒಪ್ಪಿದರೆ ನಾನು ಎಚ್‌ಡಿಕೆ ಎದುರಿಸೋಕೆ ಸಿದ್ಧ. ಈವರೆಗೂ ಪಕ್ಷ ನನಗೆ ಯಾವ ಸೂಚನೆಯನ್ನು ಕೊಟ್ಟಿಲ್ಲ ಎಂದಿದ್ದಾರೆ.
ಮಂಡ್ಯದಲ್ಲಿ ಅಂಬರೀಷ್ ಅಭಿಮಾನಿಗಳು ಹೆಚ್ಚಿದ್ದಾರೆ, ಮಂಡ್ಯ ಜನರಿಗೆ ಅಭಿವೃದ್ಧಿ ಮಾಡೋದು ಯಾರು ಎನ್ನುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.