ಹೊಸದಿಗಂತ ವರದಿ ಮಂಡ್ಯ :
ದೇಶ-ವಿದೇಶಗಳ ವಿಚಾರವನ್ನು ಮುನ್ನೆಲೆಗೆ ತಂದು ರಾಷ್ಟ್ರವನ್ನು ಒಡೆಯುವ ಹುನ್ನಾರ ಕಾಂಗ್ರೆಸ್ ಮಾಡುತ್ತಿದೆ ಎಂದು ಮಾಜಿ ಸಂಸದೆ ಸುಮಲತಾ ಟೀಕಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡು ಅನ್ನದಾತರ ಭೂಮಿ ಕಿತ್ತುಕೊಳ್ಳಲು ಮುಂದಾಗಿದೆ. ಈ ವಿಚಾರವನ್ನು ತಿರುಚಿ ದೇಶ-ವಿದೇಶಗಳ ವಿಚಾರವನ್ನು ಮುನ್ನೆಲೆಗೆ ತಂದು ಗೊಂದಲ ಸೃಷ್ಠಿಸಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ವಕ್ಫ್ ಬೋರ್ಡ್‌ನಲ್ಲಿ ಏನೆಲ್ಲಾ ಲೋಪದೋಷಗಳಿವೆ ಅದನ್ನು ಸರಿಪಡಿಸಿ ತಿದ್ದುಪಡಿ ತರಬೇಕೆಂಬ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಅಧಿವೇಶನದಲ್ಲಿ ಇದನ್ನು ತಿರುಚುವುದಕ್ಕೆ ಬೇರೆ ಬೇರೆ ದೇಶಗಳಿಂದ ವಿಚಾರಗಳನ್ನು ತಂದು ಡೈವರ್ಟ್ ಮಾಡಲು ಮುಂದಾಗಿದ್ದಾರೆ. ಇದು ಭಯಾನಕ ವಿಚಾರವಾಗಿದೆ. ಇದು ಸಣ್ಣದಾಗಿ ನಡೆಯುತ್ತಿದೆ. ಸಮುದಾಯಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಹತ್ತಿಕ್ಕುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.