August 18, 2026
Tuesday, August 18, 2026
spot_img

Summer Drink | ಬಿಸಿಲಿಗೆ ರಿಫ್ರೆಶ್ ಫೀಲ್ ಕೊಡುವ ನೆಲ್ಲಿಕಾಯಿ ಜ್ಯೂಸ್

ಬೇಸಿಗೆಯ ಬಿಸಿಲು ಜಾಸ್ತಿ ಆಗ್ತಾ ಇದ್ದಾಗ ದೇಹಕ್ಕೆ ತಕ್ಷಣ ತಂಪು ಮತ್ತು ಫ್ರೆಶ್‌ನೆಸ್ ಕೊಡುವ ಪಾನೀಯ ಬೇಕಾಗುತ್ತದೆ. ಅಂಥ ಸಮಯದಲ್ಲಿ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ನೆಲ್ಲಿಕಾಯಿ ಜ್ಯೂಸ್ ಅತ್ಯುತ್ತಮ ಆಯ್ಕೆ. ವಿಟಮಿನ್ C ತುಂಬಿರುವ ನೆಲ್ಲಿಕಾಯಿ ದೇಹವನ್ನು ಹೈಡ್ರೇಟ್ ಮಾಡುವುದು ಮಾತ್ರವಲ್ಲ, ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಮಧ್ಯಾಹ್ನ ಬಿಸಿಲಿನಿಂದ ಮನೆಗೆ ಬಂದ ತಕ್ಷಣ ಒಂದು ಗ್ಲಾಸ್ ಕುಡಿದರೆ ಸಾಕು, ದೇಹಕ್ಕೂ ಮನಸ್ಸಿಗೂ ರಿಫ್ರೆಶ್ ಫೀಲ್ ಸಿಗುತ್ತದೆ.

ಬೇಕಾಗುವ ಸಾಮಗ್ರಿಗಳು:

ನೆಲ್ಲಿಕಾಯಿ – 3 ರಿಂದ 4
ಶುಂಠಿ – ಸಣ್ಣ ತುಂಡು
ತಣ್ಣೀರು – 1 ರಿಂದ 2 ಕಪ್
ಜೇನುತುಪ್ಪ ಅಥವಾ ಸಕ್ಕರೆ – 1 ಚಮಚ
ಕಪ್ಪು ಉಪ್ಪು – ಒಂದು ಚಿಟಿಕೆ
ಐಸ್ ಕ್ಯೂಬ್ – ಬೇಕಾದಷ್ಟು
ಸ್ವಲ್ಪ ನಿಂಬೆ ರಸ (ಐಚ್ಛಿಕ)

ಮಾಡುವ ವಿಧಾನ:

ಮೊದಲು ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಬೀಜ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ನಂತರ ಮಿಕ್ಸಿ ಜಾರಿನಲ್ಲಿ ನೆಲ್ಲಿಕಾಯಿ ತುಂಡುಗಳು ಮತ್ತು ಶುಂಠಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಅದಕ್ಕೆ ತಣ್ಣೀರು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಬ್ಲೆಂಡ್ ಮಾಡಿ. ನಂತರ ಈ ಮಿಶ್ರಣವನ್ನು ಸೋಸಿ ಗ್ಲಾಸ್‌ಗೆ ಹಾಕಿ.

ಈಗ ಜೇನುತುಪ್ಪ ಅಥವಾ ಸಕ್ಕರೆ, ಚಿಟಿಕೆ ಕಪ್ಪು ಉಪ್ಪು ಮತ್ತು ಬೇಕಿದ್ದರೆ ಸ್ವಲ್ಪ ನಿಂಬೆ ರಸ ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಐಸ್ ಕ್ಯೂಬ್ ಹಾಕಿ ತಣ್ಣಗೆ ಸರ್ವ್ ಮಾಡಿ.

ಬೇಸಿಗೆಯಲ್ಲಿ ದೇಹಕ್ಕೆ ತಂಪು, ಶಕ್ತಿ ಮತ್ತು ಇಮ್ಯೂನಿಟಿ all in one ಬೇಕು ಅಂದ್ರೆ ಈ ಜ್ಯೂಸ್ ಪರ್ಫೆಕ್ಟ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !