October 9, 2026
Friday, October 9, 2026
spot_img

Summer Drink | ಮನೆಯಲ್ಲೇ ಮಾಡಿ ಪಂಜಾಬಿ ಸ್ಟೈಲ್ ಮಲೈ ಲಸ್ಸಿ

ಬೇಸಿಗೆಯ ಬಿಸಿಯಲ್ಲಿ ತಂಪು ಮತ್ತು ರುಚಿ ಎರಡನ್ನೂ ನೀಡುವ ಪಾನೀಯ ಅಂದ್ರೆ ಮಲೈ ಲಸ್ಸಿ. ಗಟ್ಟಿ ಮೊಸರು, ಮೇಲಿಂದ ಕೆನೆಭರಿತ ಮಲೈ ಮತ್ತು ಏಲಕ್ಕಿಯ ಸುವಾಸನೆ ಸೇರಿ ಈ ಲಸ್ಸಿಯ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹೋಟೆಲ್ ಶೈಲಿಯ ಈ ಪಂಜಾಬಿ ಲಸ್ಸಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು

ಗಟ್ಟಿ ತಣ್ಣನೆಯ ಮೊಸರು – 2 ಕಪ್
ಸಕ್ಕರೆ – 3 ರಿಂದ 4 ಟೇಬಲ್ ಚಮಚ
ತಣ್ಣನೆಯ ಹಾಲು ಅಥವಾ ನೀರು – ಅರ್ಧ ಕಪ್
ಏಲಕ್ಕಿ ಪುಡಿ – ಕಾಲು ಚಮಚ
ಮಲೈ ಅಥವಾ ಹಾಲಿನ ಕೆನೆ – 2 ರಿಂದ 3 ಟೇಬಲ್ ಚಮಚ
ಐಸ್ ಕ್ಯೂಬ್ಸ್ – ಬೇಕಾದಷ್ಟು
ಬಾದಾಮಿ, ಪಿಸ್ತಾ – ಸ್ವಲ್ಪ

ಮಾಡುವ ವಿಧಾನ

ಮೊದಲು ಮಿಕ್ಸಿ ಜಾರ್‌ಗೆ ತಣ್ಣನೆಯ ಗಟ್ಟಿ ಮೊಸರು ಹಾಕಿ. ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ. ಬಳಿಕ ತಣ್ಣನೆಯ ಹಾಲು ಅಥವಾ ನೀರು ಸೇರಿಸಿ ಮತ್ತೊಮ್ಮೆ ಮಿಶ್ರಣ ಮಾಡಿ.

ಈಗ ದಟ್ಟವಾದ ಮಲೈ ಸೇರಿಸಿ ಸ್ವಲ್ಪ ಮಾತ್ರ ಬ್ಲೆಂಡ್ ಮಾಡಿ. ಮಲೈ ಸಂಪೂರ್ಣ ಕರಗದೇ ಸಣ್ಣ ತುಂಡುಗಳಾಗಿ ಉಳಿದರೆ ರುಚಿ ಹೆಚ್ಚುತ್ತದೆ. ಕೊನೆಯಲ್ಲಿ ಗಾಜಿನ ಲೋಟಕ್ಕೆ ಸುರಿದು, ಮೇಲಿಂದ ಮಲೈ, ಬಾದಾಮಿ, ಪಿಸ್ತಾ ಹಾಕಿ ತಣ್ಣಗೆ ಸವಿಯಿರಿ.

Must Read