ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಎರಡು ದೊಡ್ಡ ಗಾತ್ರದ ಟೊಮ್ಯಾಟೋ, 2 ಸೂಜಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸಕ್ಕರೆ, ಕಾಳುಮೆಣಸಿನ ಹುಡಿ.
ಚೆನ್ನಾಗಿ ತೊಳೆದ ಟೋಮೇಟೋವನ್ನು ಒಂದು ಲೋಟ ನೀರು ಸೇರಿಸಿ ಚೆನ್ನಾಗಿ ರುಬ್ಬಿ ಸೋಸಿಟ್ಟುಕೊಳ್ಳಿ, ಸೂಜಿಮೆಣಸನ್ನು ಜಜ್ಜಿ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸಕ್ಕರೆ, ಕಾಳುಮೆಣಸಿನ ಪುಡಿ ಸೇರಿಸಿ ತಿರುವಿ. ಐಸ್ಕ್ಯೂಬ್ ಸೇರಿಸಿ ಕುಡಿಯಿರಿ. ಹುಳಿ, ಖಾರ, ಸಿಹಿ ಮಿಶ್ರಣದ ಜ್ಯೂಸ್ ಸಖತ್ ಟೇಸ್ಟಿ.