ಇದೇ ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ಮೌನ ಮುರಿದ ಶೋಯಬ್ ಮಲಿಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾನಿಯಾ ಮಿರ್ಜಾ ಹಾಗೂ ಶೋಯಬ್ ಮಲಿಕ್ ವಿಚ್ಛೇದನವಾಗಲಿದೆ ಎನ್ನುವ ಸುದ್ದಿಗೆ ಇದೇ ಮೊದಲ ಬಾರಿಗೆ ಶೋಯಬ್ ಮಲಿಕ್ ಉತ್ತರಿಸಿದ್ದಾರೆ.

ಈದ್ ಸಂದರ್ಭದಲ್ಲಿಯೂ ಕೂಡ ಸಾನಿಯಾ ಹಾಗೂ ಮಗ ಮಲಿಕ್ ಜೊತೆ ಇಲ್ಲದ್ದಕ್ಕೆ ವಿಚ್ಛೇದನ ಆಗಿಯೇ ಹೋಗಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಮಲಿಕ್ ಉತ್ತರಿಸಿದ್ದು, ನಮ್ಮ ಮಧ್ಯೆ ಯಾವ ಡಿವೋರ್ಸ್ ಕೂಡ ಆಗಿಲ್ಲ, ನಾವು ಚೆನ್ನಾಗಿಯೇ ಇದ್ದೇವೆ.

ಸಾನಿಯಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ಯುಸಿ ಇದ್ದಾರೆ ಹಾಗಾಗಿ ಅವರು ಈದ್‌ಗೆ ನಮ್ಮ ಜೊತೆ ಇರಲಿಲ್ಲ, ತಲೆ ಬುಡ ಇರದ ವದಂತಿಗಳು ಹೇಗೆ ಹರಿದಾಡುತ್ತವೆ ಅರ್ಥವೇ ಆಗೋದಿಲ್ಲ ಎಂದಿದ್ದಾರೆ.

ಶೋಯಬ್ ಪಾಕ್ ನಟಿ ಆಯೇಶಾ ಒಮರ್ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಹಾಗಾಗಿ ದಂಪತಿ ದೂರಾಗಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿಗಳು ಎಲ್ಲೆಡೆ ವೈರಲ್ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!