ಮಧುರೈನಲ್ಲಿ ಸ್ವಾತಂತ್ರ್ಯ ಚಳುವಳಿ ಪ್ರಜ್ವಲಿಸುವಲ್ಲಿ ಸುಂದರರಾಜನ್ ರ ಪಾತ್ರ ಮಹತ್ವದ್ದಾಗಿತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮಧುರೈನಲ್ಲಿ ರಾಷ್ಟ್ರೀಯತೆಯನ್ನು ಮತ್ತಷ್ಟು ಉಜ್ವಲವಾಗಿ ಬೆಳಗಿಸಿದ ಬೆಳೆಸಿದ ಮಹನೀಯರಲ್ಲಿ ಮಹಾಕವಿ ಆರ್.‌ಸುಂದರರಾಜನ್ ಅವರು ಒಬ್ಬರು. ಅವರು 1921 ರಲ್ಲಿ ತಮ್ಮ ಶಾಲಾ ದಿನಗಳ ಅವಧಿಯಲ್ಲೇ ರಾಷ್ಟ್ರೀಯ ಚಳವಳಿಗೆ ಸೇರಿದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಅವರ ಪಾಲ್ಗೊಳ್ಳುವಿಕೆಗೆ ಗಾಂಧೀಜಿಯವರ ಹೋರಾಟಗಳು ಪ್ರೇರಣೆಯಾಗಿತ್ತು. ಮಧುರೈನ ಜನರಲ್ಲಿ ರಾಷ್ಟ್ರೀಯತೆಯನ್ನು ಪ್ರಚಾರ ಮಾಡಲು ಅವರು ಸಭೆಗಳಲ್ಲಿ ತಾವು ರಚಿಸಿದ್ದ ಹಾಡುಗಳನ್ನು ಹಾಡಿದರು. ಸುಂದರರಾಜನ್ ಕೂಡ ಗಾಂಧೀಜಿ ಮಾರ್ಗವನ್ನೇ ಅನುಸರಿಸಿ ಹರಿಜನರ ಸೇವೆ ಮಾಡಿದರು. ಮೀನಾಕ್ಷಿಯಮ್ಮನ ದೇವಾಲಯಕ್ಕೆ ಹರಿಜನರಿಗೆ ಪ್ರವೇಶ ಕೊಡಿಸಿದವರಲ್ಲಿ ಇವರೂ ಒಬ್ಬರು. 1930 ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಒಂದು ವರ್ಷ ಜೈಲಿನಲ್ಲಿರಿಸಲಾಯಿತು. 1940 ರಲ್ಲಿ ಅವರನ್ನು ರಾಜಕೀಯ ಖೈದಿಯಾಗಿ ಬಂಧಿಸಲಾಯಿತು ಮತ್ತು ಅವರು ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿ ಕಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!