ಈ ಬಾರಿ ವಿಶ್ವಕಪ್ ಗೆಲ್ಲೋ ತಂಡ ಇಂಡಿಯಾ ಅಲ್ಲ, ಸುನಿಲ್ ಗವಾಸ್ಕರ್ ಪ್ರೆಡಿಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಕೆಲವೇ ದಿನಗಳಲ್ಲಿ ಏಕದಿನ ವಿಶ್ಕಪ್ ಆರಂಭವಾಗಲಿದೆ, ಈಗಾಗಲೇ ಅಭ್ಯಾಸ ಪಂದ್ಯಗಳು ನಡೆಯುತ್ತಿವೆ.

ಈ ಬಾರಿ ಯಾವ ತಂಡ ಗೆಲುವು ಸಾಧಿಸಬಹುದು? ಈ ಬಗ್ಗೆ ಸುನಿಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಕೂಡ ಭಾರತ,ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ಸ್ಪರ್ಧೆ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಪರಿಗಣಿಸಲಾಗಿದೆ.

ಈ ಬಾರಿ ಇಂಗ್ಲೆಂಡ್ ಪ್ರಮುಖ ಸ್ಪರ್ಧಿಯಾಗಿದ್ದು, ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಉತ್ತಮ ಸಾಮರ್ಥ್ಯ,ಅನುಭವಿ ಬೌಲರ್‌ಗಳು ಇರುವ ಕಾರಣ ಈ ಬಾರಿ ವಿಶ್ವಕಪ್ ಇಂಗ್ಲೆಂಡ್ ಕೈಸೇರಲಿದೆ ಎಂದು ಸುನಿಲ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!